ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಂತಸದ ಅಲೆಯಲ್ಲಿ ತೆರೆ ಕಂಡ ತಾಲೂಕು ಮಟ್ಟದ ಕ್ರೀಡಾಕೂಟ

ಕುಂದಗೋಳ : ಕಳೆದೆರೆಡು ದಿನಗಳಿಂದ ಹರಭಟ್ಟ ಶಾಲಾ ಆವರಣದಲ್ಲಿ ಕ್ರೀಡಾ ಜಾತ್ರೆಯನ್ನೆ ಸೃಷ್ಟಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟವು ಇಂದು ಸಂತಸದ ಅಲೆಯಲ್ಲಿ ತೆರೆ ಕಂಡವು. ಹೌದು ! ಸತತ ಎರೆಡು ದಿನಗಳ ಕಾಲ ನಡೆದ ಆಟೋಟದಲ್ಲಿ ಕುಂದಗೋಳ ತಾಲೂಕಿನ 12 ಕ್ಕೂ ಅಧಿಕ ಕಾಲೇಜುಗಳ 280 ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ ತಮ್ಮ ಇಷ್ಟದ ಗ್ರೂಪ್ ಹಾಗೂ ವ್ಯಯಕ್ತಿಕ ಕ್ರೀಡೆಗಳನ್ನು ಆಡಿ ಆನಂದ ಪಟ್ಟರು.

ವಿಶೇಷವಾಗಿ ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ತ್ರೋ ಬಾಲ್, ವ್ಹಾಲಿಬಾಲ್, ರಿಲೇ, ಸೆಟಲ್ ಬ್ಯಾಡ್ಮಿಂಟನ್, ಬಾಲ್ ಬ್ಯಾಡ್ಮಿಂಟನ್ ಆಟಗಳು ನೋಡುಗರ ಹುಮ್ಮಸ್ಸನ್ನು ಮತ್ತಷ್ಟು ಕೆರಳಿಸಿದವು.

ವಿದ್ಯಾರ್ಥಿಗಳ ವಿಭಾಗದಲ್ಲಿ ಕಬಡ್ಡಿ, ಖೋಖೋ, 400 ಮೀಟರ್ ರಿಲೇ ಪಂದ್ಯಗಳನ್ನು ಹರಭಟ್ಟ ಕಾಲೇಜು ವಿಜಯಿ ಯಾದರೇ, ವ್ಹಾಲಿಬಾಲ್ ಪಂದ್ಯದಲ್ಲಿ ಕುಬಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಾಗೂ ತ್ರೋ ಬಾಲ್ ಮತ್ತು 100 ಮೀಟರ್ ರಿಲೇ ಪಂದ್ಯದಲ್ಲಿ ಸಂಶಿ ಕೆಎಲ್ಇ ಕಾಲೇಜು ವಿಜಯ ಸಾಧಿಸಿತು.

ಇನ್ನು ವಿದ್ಯಾರ್ಥಿನಿಯರ ವಿಭಾಗದಲ್ಲಿ ಕಬಡ್ಡಿ, ಖೋಖೋ, ತ್ರೋ ಬಾಲ್, ರಿಲೇ ಹರಭಟ್ಟ ಕಾಲೇಜಿನ ಮಕ್ಕಳು ವಿಜೇತರಾದರೇ, 100 ಮೀಟರ್ ರಿಲೇ ಪಂದ್ಯವನ್ನು ಎಫ್.ಸಿ.ಎಮ್ ಕುಂದಗೋಳ ಕಾಲೇಜು ವಿಜಯ ಸಾಧಿಸಿತು.

ತಾಲೂಕು ಮಟ್ಟದ ಕ್ರೀಡೆಯಲ್ಲಿ ಪ್ರಥಮ ಸ್ಥಾನದ ಗೆಲುವು ಸಾಧಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶಿಕ್ಷಕರು ಬೆನ್ನು ತಟ್ಟಿ ಪ್ರೋತ್ಸಾಹ ನೀಡಿ ರಾಜ್ಯ ಮಟ್ಟದ ಆಟಕ್ಕೆ ಸನ್ನದ್ಧರಾಗಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

24/02/2021 02:47 pm

Cinque Terre

37.11 K

Cinque Terre

0

ಸಂಬಂಧಿತ ಸುದ್ದಿ