ಹುಬ್ಬಳ್ಳಿ: ಹುಬ್ಬಳ್ಳಿಯ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸುವ ಸದುದ್ದೇಶದಿಂದ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಆರ್.ಕೆ.ಟೈಗರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಉಣಕಲ್ ಪ್ರೀಮಿಯರ್ ಲೀಗ್ ಆಯೋಜನೆ ಮಾಡಿದ್ದು,ಯುಪಿಎಲ್ ಈಗ ಯಾವುದೇ ಐಪಿಎಲ್ ಗೂ ಕಡಿಮೆ ಇಲ್ಲ ಎಂಬುವಂತಾಗಿದೆ.
ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಸುವ ನಿಟ್ಟಿನಲ್ಲಿ ಫೆ.11ರಿಂದ 14 ರ ವರೆಗೆ ಹುಬ್ಬಳ್ಳಿ ಸಂತೋಷನಗರದ ಪಿಜಿ ಮೈದಾನದಲ್ಲಿ ಆಯೋಜನೆ ಮಾಡಿರುವ ಉಣಕಲ್ ಪ್ರೀಮಿಯರ್ ಲೀಗ್ ಈಗ ಎರಡನೇ ದಿನಕ್ಕೆ ಕಾಲಿಟ್ಟಿದೆ.ಉಣಕಲನ ಎಂಟು ತಂಡಗಳನ್ನು ಒಳಗೊಂಡಿರುವ ಈ ಲೀಗ್ ಈಗ ಐಪಿಎಲ್ ಅನುಭವ ನೀಡುತ್ತಿರುವುದಂತೂ ಸತ್ಯ..
ಉಣಕಲ್ ಪ್ರೀಮಿಯರ್ ಲೀಗ್ ನಲ್ಲಿ ಉಣಕಲನ ಏಂಟು ತಂಡಗಳು ಭಾಗವಹಿಸಿದ್ದು,ಐಪಿಎಲ್ ಫಾರ್ಮೆಟ್ ನಲ್ಲಿಯೇ ಆಟವನ್ನು ಆಡಿಸಲಾಗುತ್ತಿದೆ.
ಇನ್ನೂ ವಿಶೇಷ ಅಂದರೇ ಎಲ್ಲ ಕಮ್ಯುನಿಟಿಯವರು ಆಟ ಆಡುತ್ತಿದ್ದಾರೆ. ಆರ್.ಕೆ.ಟೈಗರ್ಸ್ ಸ್ಪೋರ್ಟ್ಸ್ ಕ್ಲಬ್ ಆಯೋಜನೆ ಮಾಡಿರುವ ಯುಪಿಎಲ್ ಈಗ ಉತ್ಸಾಹಿ ಯುವ ಆಟಗಾರರಿಗೆ ಹುಮ್ಮಸ್ಸು ನೀಡದಂತಾಗಿದೆ.
ಆರ್.ಕೆ.ಟೈಗರ್ಸ್ ಅಧ್ಯಕ್ಷ ರಮೇಶ ಕಾಂಬಳೆ ನೇತೃತ್ವದಲ್ಲಿ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಲಾಗಿದ್ದು,ಟೂರ್ನಮೆಂಟ್ ಗೆ ಡಿಸಿಪಿ ಕೆ.ರಾಮರಾಜನ್ ಚಾಲನೆ ನೀಡಿದರು.
ಫೆ.11 ರಿಂದ ಪ್ರಾರಂಭವಾಗಿದ್ದು,14 ರಂದು ಪೈನಲ್ ನಡೆಯಲಿದೆ. ಇನ್ನೂ ಒಂದೊಂದು ತಂಡಕ್ಕೆ 3 ಆಟಗಳನ್ನು ಆಡುವ ಅವಕಾಶ ಇದ್ದು,ಈ ಲೀಗ್ ನಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಆಡಿದ ಆಟಗಾರರು ಭಾಗವಹಿಸಿರುವುದು ಯುಪಿಎಲ್ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ.
ಇನ್ನೂ ಟೂರ್ನಮೆಂಟ್ ನಲ್ಲಿ ಮೊದಲ ಬಹುಮಾನ 75 ಸಾವಿರ ಹಾಗೂ ಟ್ರೋಪಿ,ದ್ವೀತಿಯ ಬಹುಮಾನ 50 ಸಾವಿರ ಹಾಗೂ ಟ್ರೋಪಿ ಅಲ್ಲದೇ ಬೆಸ್ಟ್ ಬ್ಯಾಟ್ಸ್ ಮನ್, ಬೆಸ್ಟ್ ಬೌಲರ್, ಮ್ಯಾನ್ ಆಫ್ ದಿ ಮಾಚ್ಯ..ಟಿವಿ ಹಾಗೂ ಪ್ರೀಡ್ಜ್ ಕೂಡ ಬಹುಮಾನ ನೀಡಲಾಗುತ್ತಿದ್ದು, ಬಿಸಿಲಿನಲ್ಲಿಯೂ ಕೂಡ ಆಟಗಾರರು ಉತ್ತಮ ರೀತಿಯಲ್ಲಿ ಆಟವನ್ನು ಆಡುತ್ತಿರುವುದು ವಿಶೇಷವಾಗಿದೆ.
Kshetra Samachara
12/02/2021 05:08 pm