ಅಣ್ಣಿಗೇರಿ: ಧಾರವಾಡ ಜಿಲ್ಲಾ ಸ್ಕ್ವಾಯ್ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಗೋಲ್ಡನ್ ಕರಾಟೆ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಅಂಜುಮನ್ ಶಾದಿಮಹಲ್‌ನಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸ್ಕ್ವಾಯ್ ಸಮರ ಕಲೆ ಸ್ಪರ್ಧೆಯಲ್ಲಿ 24 ವಿದ್ಯಾರ್ಥಿಗಳು ಗೆಲುವು ಸಾಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದರಲ್ಲಿ 14 ಪುರುಷ ಸ್ಪರ್ಧಿಗಳು 10 ಮಹಿಳಾ ಸ್ಪರ್ಧಿಗಳು ಸೇರಿದ್ದಾರೆ. ಗೋಲ್ಡನ್ ಕರಾಟೆ ಕ್ಲಬ್‌ನ ಗಣೇಶ ಇಳಕಲ್ ಅವರು ಈ ಸ್ಪರ್ಧಿಗಳಿಗೆ ತರಬೇತುದಾರರಾಗಿದ್ದರು. ಕರ್ನಾಟಕ ಸ್ಕ್ವಾಯ್ ಅಸೋಸಿಯೇಷನ್ ಕಾರ್ಯದರ್ಶಿ ಹರಿಹರದ ಮಹಮ್ಮದ ಅಲಿ ಅಲ್ಲದೆ ಶೋಯಬ್, ನಿಖಿಲ್ ಸ್ಪರ್ಧೆಯ ನಿರ್ಣಾಯಕರಾಗಿದ್ದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಕಾಶ್ಮೀರದಲ್ಲಿ ಹುಟ್ಟಿ, ಪ್ರಾಚೀನ ದಕ್ಷಿಣ ಏಷ್ಯಾಯಾದ ಸಮರ ಕಲೆಗಳಲ್ಲಿ ಒಂದಾದ ಸ್ಕ್ವಾಯ್ ಮಹತ್ವ, ಬೆಳವಣಿಗೆ, ಅದರ ಭವಿಷ್ಯ ಕುರಿತು ಮಹಮ್ಮದ್ ಅಲಿ ವಿವರ ನೀಡಿ ಸ್ಪರ್ಧಿಗಳನ್ನು ಹುರಿದುಂಬಿಸಿದರು. ಗೋಲ್ಡನ್ ಕರಾಟೆ ಕ್ಲಬ್ ಅಧ್ಯಕ್ಷ ಸಿ. ಜಿ. ನಾವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಣ ನಾಯಕ್, ಪ್ರೇಮನಾಥ ಬಾಕಳೆ, ಕೃಷ್ಣ ಹಂದ್ರಾಳ . ಗಣೇಶ ಶಾನುಭೋಗರ ಉಪಸ್ಥಿತರಿದ್ದರು.
Kshetra Samachara
24/01/2021 07:35 am