ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅವಳಿನಗರದಲ್ಲಿ ಎಗ್ಗಿಲ್ಲದೆ ಮುಂದುವರೆದ ಕ್ರಿಕೆಟ್ ಬೆಟ್ಟಿಂಗ್ : ಆರು ಜನ ಅರೆಸ್ಟ್ 7.75 ಲಕ್ಷ ವಶ

ಹುಬ್ಬಳ್ಳಿ: ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಟೂರ್ನಿಯ ಪಂದ್ಯಗಳ ಬಗ್ಗೆ ಬೆಟ್ಟಿಂಗ್ ದಂಧೆಯ ಮೇಲೆ ಕಾರ್ಯಾಚರಣೆ ಮುಂದುವರಿಸಿರುವ ಪೊಲೀಸರು ಅವಳಿ ನಗರಗಳಲ್ಲಿ ಒಟ್ಟು 7.75 ಲಕ್ಷ ಹಣ ವಶಪಡಿಸಿಕೊಂಡು, ಆರು ಜನರನ್ನು ಬಂಧಿಸಿದ್ದಾರೆ.

ಹುಬ್ಬಳ್ಳಿ–ಗದಗ ರಸ್ತೆಯಲ್ಲಿ ರೈಲ್ವೆ ವರ್ಕ್ ಶಾಪ್ ಮುಂದೆ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವಿನ ಪಂದ್ಯದ ವೇಳೆ ಬೆಟ್ಟಿಂಗ್ ನಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಲಾಗಿದೆ.

ಅವರಿಂದ 15,800 ಹಣ ಮತ್ತು ಮೂರು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅರವಿಂದ ನಗರದ ಕಿಶನ್ ಜರತಾರಘರ, ಕೇಶ್ವಾಪುರದ ಶಬ್ಬೀರ ಹೊಸಪೇಟೆ, ಸಿದ್ದಾರ್ಥ ಕಾಲೊನಿಯ ಪವನ ಹಿರೇಮನಿ ಮತ್ತು ಆನಂದ ನಗರದ ಸುರೇಶ ಬುರಬುರೆ ಬಂಧಿತರು.

ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿ ತಾಲ್ಲೂಕಿನ ಸಲಕಿನಕೊಪ್ಪ ಗ್ರಾಮದ ಅವಿನಾಶ ಉರ್ಫ್ ಅವಿ ಅಶೋಕ ಚವ್ಹಾಣ ಮತ್ತು ಕೆಲಗೇರಿ ಆಂಜನೇಯ ನಗರದ ಮಂಜುನಾಥ ಬಸಪ್ಪ ವಾಲೀಕಾರ ಅವರನ್ನು ಉಪನಗರ ಠಾಣೆಯ ಪೊಲೀಸರು ಶನಿವಾರ ಬಂಧಿಸಿ 7.60 ಲಕ್ಷ ನಗದು, ಮೂರು ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಸಪ್ತಾಪೂರ ಬಡಾವಣೆಯ ಸ್ಪಂದನಾ ಆಸ್ಪತ್ರೆಯ ಬಳಿ ರಸ್ತೆ ಬದಿಯಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದರು.

ಎಸಿಪಿ ಜಿ.ಅನುಷಾ ಅವರ ಮಾರ್ಗದರ್ಶನದಲ್ಲಿ ಉಪನಗರ ಠಾಣೆಯ ಸಿಪಿಐ ಪ್ರಮೋದ ಯಲಿಗಾರ ಅವರ ನೇತೃತ್ವದಲ್ಲಿ ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ, ಸಿಬ್ಬಂದಿ ಬಸವರಾಜ ಮಾಗುಂಡನವರ, ಕೆ.ಎಂ.ಡೊಕ್ಕನವರ, ಆರ್.ಎಚ್.ಬಡ್ನಿ, ಯು.ಡಿ.ಬಂಗಾರಿ, ಚೇತನ ಇಂಗಳಗಾವಿ ಮತ್ತು ಆನಂದ ಬಡಿಗೇರ ದಾಳಿ ನಡೆಸಿದೆ.

Edited By : Nirmala Aralikatti
Kshetra Samachara

Kshetra Samachara

12/10/2020 09:56 am

Cinque Terre

34.38 K

Cinque Terre

0

ಸಂಬಂಧಿತ ಸುದ್ದಿ