ಹುಬ್ಬಳ್ಳಿ:ಪಸ್ಟ್ ಕ್ರಿಕೆಟ್ ಅಕಾಡೆಮಿಯಿಂದ ಆಯೋಜಿಸಲಾಗಿರುವ ಸ್ಕೈ 360 ಸೊಲ್ಯೂಷನ್ ಅಂಡರ್ 14 ಕ್ರಿಕೆಟ್ ಟೂರ್ನಮೆಂಟ್ ಎರಡನೇ ದಿನಕ್ಕೆ ಕಾಲಿಟ್ಟಿದ್ದು,ಎರಡನೇ ದಿನದ ಪಂದ್ಯಗಳನ್ನು ಕೂಡ ಶಾಂತಿಯುತವಾಗಿ ಪೂರ್ಣಗೊಳಿಸಿದೆ.
ಟೂರ್ನಮೆಂಟ್ ಮೂರನೇ ಪಂದ್ಯದಲ್ಲಿ ವಿ.ಎಂ.ಸಿ.ಎ ಧಾರವಾಡ ಹಾಗೂ ಜೆಸಿಎ ಗದಗ ತಂಡಗಳು ಸೆಣಸಾಡುವ ಮೂಲಕ ಬಾರಿ ಹಣಾಹಣಿ ಪಂದ್ಯವಾಗಿ ಮಾರ್ಪಟ್ಟಿತು. ಇನ್ನೂ ಸೆಣಸಾಟದಲ್ಲಿ ಮೊದಲ ಟಾಸ್ ಗೆದ್ದ ಧಾರವಾಡ ವಿ.ಎಂ.ಸಿ.ಎ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ 29.4 ಓವರ್ ಗಳಲ್ಲಿ 10 ವಿಕೆಟ್ ಕಳೆದುಕೊಂಡು 148 ರನ್ ಕಲೆ ಹಾಕಿತು.ಆಟಗಾರರಾದ ಲಕ್ಷ್ಮೀನಾರಾಯಣ ಭಟ್ 25 ಎಸೆತದಲ್ಲಿ ನಾಲ್ಕು ಪೋರ್ ಬಾರಿಸುವ ಮೂಲಕ 25 ರನ್ ಕಲೆಹಾಕಿ ತಂಡಕ್ಕೆ ದೊಡ್ಡ ರನ್ ತಂದುಕೊಟ್ಟರು.ಅಲ್ಲದೇ ಅಖಿಲ್ ಎಸ್ ಅವರು 24 ಎಸೆತದಲ್ಲಿ 23 ರನ್ ಕಲೆ ಹಾಕಿದರು.
ಬಳಿಕ ಬ್ಯಾಟಿಂಗ್ ಪ್ರಾರಂಭಿಸಿದ ಜನುಪಂಥರ ಕ್ರಿಕೆಟ್ ಅಕಾಡೆಮಿ ಆರಂಭಿಕ ಆಟದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಕೂಡ 36 ರನ್ ಅಂತರದಲ್ಲಿ ಸೋಲನ್ನು ಅನುಭವಿಸಬೇಕಾಯಿತು.ಇನ್ನೂ ಗದಗ ತಂಡದ ಆಟಗಾರರಾದ ಪ್ರಧುಮಾನ್ ಪಟೇಲ್ 45 ಎಸೆತದಲ್ಲಿ 31 ರನ್ ಹಾಗೂ ರಂಗು ಪಾಟೀಲ 44 ಎಸೆತದಲ್ಲಿ 23 ರನ್ ಗಳಿಸಿದರು ಕೂಡ ಪ್ರಯತ್ನ ವಿಫಲವಾಯಿತು.
ಇನ್ನೂ ಎರಡು ತಂಡದಲ್ಲಿ ಕೂಡ ಉತ್ತಮ ಬೌಲರ್ ಗಳ ಪ್ರದರ್ಶನ ನೋಡುಗರ ಮೈಮನ ತಣಿಸಿದವು.
ಬಳಿಕ ಪ್ರಾರಂಭಗೊಂಡ ನಾಲ್ಕನೇ ಪಂದ್ಯದಲ್ಲಿ ಎಸ್.ಡಿ.ಎಂ.ಸಿ.ಎ ಧಾರವಾಡ ಹಾಗೂ ಹುಬ್ಬಳ್ಳಿ ಕೊಲ್ಟ್ ಎದುರು ಬದುರಾಗಿದ್ದು,ವಿಶೇಷವಾಗಿತ್ತು. ಎಸ್.ಡಿ.ಎಂ.ಸಿ.ಎ ಧಾರವಾಡ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 30 ಓವರ್ ಗಳಲ್ಲಿ 10 ವಿಕೆಟ್ ಪತನಕ್ಕೆ 89 ರನ್ ಕಲೆಹಾಕಿತು.ಬಳಿಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾದ ಹುಬ್ಬಳ್ಳಿ ಕೊಲ್ಟ್ ತಂಡ ಕೇವಲ ಒಂಬತ್ತು ಓವರ್ ಗಳಲ್ಲಿ 90 ರನ್ ಬಾರಿಸುವ ಮೂಲಕ ಧಾರವಾಡ ತಂಡವನ್ನು ಸೋಲಿಸಿತು.
ಹುಬ್ಬಳ್ಳಿ ಕೊಲ್ಟ್ ತಂಡದ ಆಕ್ರಮಣಕಾರಿ ಬ್ಯಾಟ್ಸ್ಮನ್ ಗಳಾದ ಆಯುಷ ಪಟೇಲ್ 28 ಎಸೆತದಲ್ಲಿ 4 ಬೌಂಡರಿ ಬಾರಿಸುವ ಮೂಲಕ 33 ರನ್ ಕಲೆಹಾಕಿದರೂ ಇವರಿಗೆ ಜೊತೆಯಾಗಿ ನಿಂತಿದ್ದ ವಿಜಯ ಬಂಡಿ 27ಎಸೆತದಲ್ಲಿ 32 ರನ್ ಗಳಿಸುವ ಮೂಲಕ ಎಸ್.ಡಿ.ಎಂ.ಸಿ.ಎ ಧಾರವಾಡ ತಂಡದ ವಿರುದ್ಧ ಹತ್ತು ವಿಕೆಟ್ ಜಯವನ್ನು ಸಾಧಿಸಿ ಕ್ರೀಡಾಂಗಣದಲ್ಲಿ ಹಬ್ಬದ ಕಳೆ ನೆಡುವಂತೆ ಮಾಡಿದರು.
Kshetra Samachara
14/12/2020 08:17 pm