ಹುಬ್ಬಳ್ಳಿ: ಕೊರೋನಾ ವೈರಸ್ ಬಂದಿದ್ದೇ ಬಂದಿದ್ದು,ಪ್ರಮುಖ ಹಬ್ಬಗಳೆಲ್ಲ ಕೊರೋನಾ ಭಯದಲ್ಲಿ ಆಚರಣೆಯಾಗದೇ ಹೋದವು ಆದರೇ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು.ಈಗ ಲಾಕ್ ಡೌನ್ ಸಡಿಲಿಕೆ ಮಾಡಿದ್ದು,ಕೊಂಚ ನಿರಾಳತೆಯನ್ನು ತಂದು ಕೊಟ್ಟಿದೆ.ಈ ಹಿನ್ನೆಲೆಯಲ್ಲಿ ದಸರಾ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವ ಸದುದ್ದೇಶದಿಂದ ಶ್ರೀ ಸದ್ಗುರು ಚೆಸ್ ಮಾರ್ಟ್ ಆ್ಯಂಡ್ ಮ್ಯೂಸಿಕ್ ಅಕಾಡೆಮಿ ವತಿಯಿಂದ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸಹಭಾಗಿತ್ವದಲ್ಲಿ ಚೆಸ್ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ.
ಆನ್ ಲೈನ್ ಮೂಲಕ ನಾಳೆ ಸಾಯಂಕಾಲ 4-30ಕ್ಕೆ ನಡೆಯಲಿರುವ ಚೆಸ್ ಪಂದ್ಯದಲ್ಲಿ ಒಟ್ಟು ಏಳು ರೌಂಡ್ ಆಯೋಜಿಸಲಾಗಿದ್ದು, ಒಟ್ಟು ಐದು ಬಹುಮಾನಗಳನ್ನು ವಿಜೇತರಿಗೆ ನೀಡಲಾಗುತ್ತದೆ.
ಸಾಮಾಜಿಕ ಅಂತರ ಕಾಯ್ದುಕೊಂಡು ದಸರಾ ಹಬ್ಬವನ್ನು ಆರೋಗ್ಯಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಚೆಸ್ ಪಂದ್ಯದಲ್ಲಿ ನೀವು ಕೂಡ ಭಾಗವಹಿಸಿ ಆಕರ್ಷಕ ಬಹುಮಾನ ನಿಮ್ಮದಾಗಿಸಿಕೊಳ್ಳಿ...
VIJAYKUMAR HALLUR
(chess coach, astrologer) Dharwad
9986990737
Kshetra Samachara
17/10/2020 02:48 pm