ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ಆಗುತ್ತಿವೆ. ಹೊಸ ಹೊಸ ಯಂತ್ರೋಪಕರಣಗಳು ಹುಟ್ಟಿಕೊಳ್ಳುತ್ತಿವೆ. ಬಿತ್ತನೆ ಹಾಗೂ ಕೊಯ್ಲು ಮಾಡುವುದಕ್ಕೆ ನವನವೀನ ಯಂತ್ರಗಳು ಬಂದಿವೆ. ಅದೇ ರೀತಿ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸಲು ರೈತರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ.
ಹೌದು! ಇದೀಗ ರೈತರು ಒಂದು ಹೆಜ್ಜೆ ಮುಂದೆ ಹೋಗಿ ಡ್ರೋಣ್ ಮೂಲಕ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುವ ಮೂಲಕ ತಂತ್ರಜ್ಞಾನದತ್ತ ಮುಖ ಮಾಡಿದ್ದಾರೆ.
ಬೇರೆ ಬೇರೆ ದೇಶಗಳಲ್ಲಿ ಅಷ್ಟೇ ಏಕೆ ಬೇರೆ ಬೇರೆ ರಾಜ್ಯ, ಜಿಲ್ಲೆಗಳಲ್ಲೂ ಡ್ರೋಣ್ ಮುಖಾಂತರ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುವುದನ್ನು ನಾವು ನೋಡಿದ್ದೇವೆ. ಇದೀಗ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಈರಣ್ಣ ವಡ್ಡಟ್ಟಿ ಎಂಬ ರೈತರೊಬ್ಬರು ತಮ್ಮ ನಾಲ್ಕು ಎಕರೆ ಪ್ರದೇಶದಲ್ಲಿನ ಹೆಸರು ಬೆಳೆಗೆ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪಡಿಸಿ ತಂತ್ರಜ್ಞಾನದ ಕೃಷಿಗೆ ಮುಂದಾಗಿದ್ದಾರೆ.
ಬಾಡಿಗೆ ಡ್ರೋಣ್ ಪಡೆದುಕೊಂಡು ಬಂದ ರೈತ ಇಂಥದ್ದೊಂದು ಪ್ರಯತ್ನ ಮಾಡಿದ್ದಾರೆ. ಈ ಡ್ರೋಣ್ ಏಳು ನಿಮಿಷಕ್ಕೆ ಒಂದು ಎಕರೆಗೆ ಕ್ರಿಮಿನಾಶಕ ಸಿಂಪಡಿಸುತ್ತದೆ. ಈರಣ್ಣ ಅವರು ತಮ್ಮ ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದ ಹೆಸರು ಬೆಳೆಗೆ ಡ್ರೋಣ್ ಮುಖಾಂತರ ಕ್ರಿಮಿನಾಶಕ ಸಿಂಪಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/07/2022 08:11 pm