ಹುಬ್ಬಳ್ಳಿ: ಇತ್ತೀಚೆಗೆ ತಮಿಳುನಾಡು ರಾಜ್ಯದ ಕಟ್ಟನ್ಕುಳತ್ತೂರ ನಗರದಲ್ಲಿ ನಡೆದ ರಾಷ್ಟ್ರಮಟ್ಟದ ಎಸ್.ಎ.ಇ ಇಂಡಿಯಾ ಏರೋಡಿಸೈನ್ ಚ್ಯಾಲೆಂಜ್ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯದ ಏರೋ ಕೆಎಲ್ಇ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಹೌದು. ತಂಡವು ಕಳೆದ 7 ಬಾರಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ 4 ಬಾರಿ ಭಾಗವಹಿಸಿ, ಅದರಲ್ಲಿ ಸತತ 3 ಬಾರಿ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದೆ. ಎಸ್.ಆರ್.ಎಮ್ ತಾಂತ್ರಿಕ ಸಂಸ್ಥೆ ಆಯೊಜಿಸಿದ ಈ ರಾಷ್ಟ್ರೀಯ ಸ್ಪರ್ಧೆಯಲ್ಲಿ ದೇಶಾದ್ಯಂತ 74 ತಂಡಗಳು ಭಾಗವಹಿಸಿದ್ದು, ಅದರಲ್ಲಿ ಏರೋ ಕೆಎಲ್ಇ ಪ್ರಥಮ ಸ್ಥಾನ ಪಡೆದು ಒಂದು ಲಕ್ಷ ರೂ. ನಗದು ಬಹುಮಾನ ತನ್ನದಾಗಿಸಿಕೊಂಡಿದೆ.
ಇನ್ನೂ ಈ ತಂಡದಲ್ಲಿ ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ , ಎಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ, ಆಟೋಮೇಷನ್ ಹಾಗೂ ರೊಬೋಟಿಕ್ಸ್ ವಿಭಾಗದ ಒಟ್ಟು 18 ವಿದ್ಯಾರ್ಥಿಗಳು ಭಾಗವಹಿಸಿ ಈ ಯಶಸ್ಸಿಗೆ ಪಾತ್ರರಾಗಿದ್ದಾರೆ. ಸ್ಪರ್ಧೆಯ ಕೊನೆಯ ಹಂತದಲ್ಲಿ ಐ.ಐ.ಟಿ, ಐ.ಐ.ಎಸ್.ಸಿ, ಡಿ.ಆರ್.ಡಿ.ಒ ಹಾಗೂ ಮುಂತಾದ ಪ್ರತಿಷ್ಠಿತ ಸಂಸ್ಥೆಯ ಗಣ್ಯ ವ್ಯಕ್ತಿಗಳು ತೀರ್ಪುಗಾರರಾಗಿದ್ದರು. ಇದರಲ್ಲಿ ತಂಡದ ನಾಯಕ ಪ್ರಜ್ವಲ್.ಜಿ ಜೊತೆ ವಿನಾಯಕ ಪಾಸ್ತೆ, ವಿನುತಾ. ಎಸ್, ಆದಿತ್ಯ ದೇಶಪಾಂಡೆ, ಪ್ರೀತಿ ಹೆಗಡಾಳ, ಸಮರ್ಥ ಗುರುಜಿ, ಅಮೃತ ನೂಲಿ, ಲಕ್ಷ್ಮೀ ಕೋಲ್ಕಾರ, ಪ್ರಜ್ವಲ್ ಕೆರೂಡಿ, ರಂಜೀತಾ ಅಂಗಡಿ, ಸಂತೋಷ ಜಾಯಿ, ಅನುರಾಗ ಶೇಖರ, ಜಗದೀಶ ಪ್ರಧಾನಿ, ನಿಶಾದ ಹೂಲಿ, ನಂದನ ದಾತೆ, ರೋಹನ ಕೊಲ್ಹಾರ, ಸಿದ್ಧರಾಜ ಕನೋಜ, ವೃಷಭ.ಪಿ.ವೈ ಪಾಲ್ಗೊಂಡಿದ್ದರು.
ಇಂತಹ ಸ್ಪರ್ಧೆಯಲ್ಲಿ ವಿಶ್ವವಿದ್ಯಾಲಯದ ಹೆಸರನ್ನು ಸತತ ಮೂರನೆಯ ಬಾರಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ದ ವಿಧ್ಯಾರ್ಥಿಗಳಿಗೆ ಕೆ.ಎಲ್.ಇ ಸಂಸ್ಥೆಯ ಉಪ ಕುಲಪತಿಗಳಾದ ಡಾ. ಅಶೋಕ ಶೆಟ್ಟರ್, ಸ್ಪರ್ಧಾಳು ತಂಡದ ಮಾರ್ಗದರ್ಶಿ ಹಾಗೂ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಬಿ.ಕೊಟ್ಟೂರಶೆಟ್ಟರ್ ಹಾಗೂ ಆಡಳಿತ ಮಂಡಳಿ ಮತ್ತು ಆಡಳಿತ ಮಂಡಳಿಯ ಪ್ರಾಚಾರ್ಯರು ಅಭಿನಂದಿಸಿದ್ದಾರೆ.
Kshetra Samachara
12/09/2022 12:09 pm