ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜ್ಞಾನ ಕೊಟ್ಟ ವಿಜ್ಞಾನ ಸೂಕ್ತಿ ಪ್ರದರ್ಶನ: ಇದು ಮಾಹಿತಿಯ ಹೂರ

ಹುಬ್ಬಳ್ಳಿ: ಸಾಮಾನ್ಯವಾಗಿ ಎಲ್ಲ ಶಾಲೆ-ಕಾಲೇಜುಗಳಲ್ಲೂ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗುತ್ತೆ. ಆದ್ರೆ ಹುಬ್ಬಳ್ಳಿಯ ಕೆ.ಎಚ್ ಪಾಟೀಲ್‌ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನದ ಸದ್ಬಳಕೆ ಹಾಗೂ ದುರ್ಬಳಕೆ ಬಗ್ಗೆ ತಿಳಿವಳಿಕೆ ಮೂಡಿಸುವ ಸೂಕ್ತಿ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ವಿಜ್ಞಾನದ ಅನೇಕ ಸೂಕ್ತಿಗಳನ್ನು ಪ್ರದರ್ಶಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅವುಗಳ ಬಗ್ಗೆ ವೀಕ್ಷಣೆಗೆ ಬಂದಿದ್ದ ಸಾರ್ವಜನಿಕರಿಗೆ ತಿಳಿವಳಿಕೆ ಹೇಳಿದರು.

ಸೂಕ್ತಿ ಪ್ರದರ್ಶನ ವೀಕ್ಷಿಸಿದ ವೇಮನ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಆರ್.ಕೆ ಪಾಟೀಲ್ ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು‌.

ಪ್ರಾಚಾರ್ಯ ಎಸ್.ಬಿ ಸಣಗೌಡ್ರ, ಸಹ ಸಂಯೋಜಕ ಡಾ. ಶಿವರಾಮ್ ಪಾಟೀಲ್, ಶಂಕರ ಕುಂಬಾರ, ಎಚ್.ಎಚ್ ಕಿರೇಸೂರ ಸೇರಿದಂತೆ ಕಾಲೇಜಿನ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಈ ವೇಳೆ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

19/05/2022 08:40 pm

Cinque Terre

32.16 K

Cinque Terre

0

ಸಂಬಂಧಿತ ಸುದ್ದಿ