ಕುಂದಗೋಳ : ಮಕ್ಕಳಿಗೆ ಒಳ್ಳೆಯ ವೇದಿಕೆ ಸಿಕ್ರೇ ಸಾಕು ಅವರಲ್ಲಿರುವ ಶಿಕ್ಷಣ, ಜ್ಞಾನ, ತನ್ನಿಂದ ತಾನೇ ಹೊರಬಂದು ಹೊಸ ಆವಿಷ್ಕಾರವನ್ನೇ ಸೃಷ್ಠಿ ಮಾಡುತ್ತೇ, ಅಂತಹ ಆವಿಷ್ಕಾರ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಕುಂದಗೋಳ ಪಟ್ಟಣದ ಹರಭಟ್ಟ ಶಾಲಾ ವಿದ್ಯಾರ್ಥಿಗಳು ಇಂದು ಪಾತ್ರರಾಗಿದ್ದಾರೆ.
ಹೌದು ! ವಿಜ್ಞಾನ ವಸ್ತು ಪ್ರದರ್ಶನ ಅಂಗವಾಗಿ ಜೀವಶಾಸ್ತ್ರ, ರಾಸಾಯನಶಾಸ್ತ್ರ, ಜೈವಿಕಶಾಸ್ತ್ರ, ತಂತ್ರಜ್ಞಾನದ ಪ್ರಯೋಗ ಮಾಹಿತಿಯನ್ನು ಒಂದರಿಂದ ಹತ್ತನೇ ತರಗತಿ ಮಕ್ಕಳು ಬಿತ್ತರಿಸಿ ಜೊತೆ ಜೊತೆಗೆ ಕ್ರೀಡೆ ಸಾಂಸ್ಕೃತಿಕ ಜಗತ್ತಿನ ಕಲೆ ಕವಿ ಕಾವ್ಯದ ಪರಿಚಯವನ್ನು ಇತರರಿಗೆ ತಿಳಿಸಿ ವಿಜ್ಞಾನ ವಸ್ತು ಪ್ರದರ್ಶನ ಯಶಸ್ವಿಗೊಳಿಸಿದರು.
ಇನ್ನೂ ಮಕ್ಕಳನ್ನು ಅತಿ ಉತ್ಸಾಹದಿಂದ ತಯಾರು ಮಾಡಿದ ಹರಭಟ್ಟ ಶಾಲಾ ಶಿಕ್ಷಕ ವಿದ್ಯಾರ್ಥಿಗಳ ಪ್ರಯೋಗಗಳನ್ನು ಕುಂದಗೋಳ ಪಟ್ಟಣದ ಇನ್ನೂಳಿದ ಶಾಲಾ ವಿದ್ಯಾರ್ಥಿಗಳು ವೀಕ್ಷಿಸಿ ಮಾಹಿತಿ ತಿಳಿದು ಖುಷಿಪಟ್ಟರು
Kshetra Samachara
10/11/2021 09:34 pm