ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮೂರು ದಿನಗಳ ಕಾಲ ಅದ್ಧೂರಿ ಉರುಸ್ ಆಚರಣೆ

ಕಲಘಟಗಿ: ಪಟ್ಟಣದ ಹಜರತ್ ಪೀರ್ ರುಸ್ತುಮ್ ಶಹೀದ ದರ್ಗಾದಲ್ಲಿ ಈದ್ ಮಿಲಾದ್ ಅಂಗವಾಗಿ ಇದೆ ರವಿವಾರ ಅಕ್ಟೋಬರ್ 9ರಿಂದ 11ರವರೆಗೆ ಮೂರು ದಿನಗಳ ಕಾಲ ಅದ್ಧೂರಿಯಾಗಿ ಉರುಸ್ ಆಚರಿಸಲಾಗುತ್ತಿದೆ. ಈ ಒಂದು ಉರಸ್‌ನಲ್ಲಿ ವಿಶೇಷವಾಗಿ ತಯಾರಿಸಿದ ಮೆಕ್ಕಾ ಮದೀನಾವನ್ನು ಸಾರ್ವಜನಿಕರ ವೀಕ್ಷಣೆಗೆ ಏರ್ಪಡಿಸಲಾಗಿದ್ದು ವಿಶೇಷವಾಗಿದೆ.

ಈಗಾಗಲೇ ಉರುಸಿನ ಸಿದ್ಧತೆಗಳು ಪ್ರಾರಂಭಗೊಂಡಿದ್ದು ಲೈಟಿನ ಅಲಂಕಾರ ಪೆಂಡಾಲಗಳನ್ನು ಹಾಕಲಾಗುತ್ತಿದ್ದು ಬಂದ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಈ ಒಂದು ಉರುಸಿಗೆ ಹೆಚ್ಚಿನ ರೀತಿಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ ಅಜಮತ್ ಜಾಗಿರದಾರ ತಿಳಿಸಿದರು.

Edited By :
Kshetra Samachara

Kshetra Samachara

08/10/2022 08:22 am

Cinque Terre

66.09 K

Cinque Terre

3

ಸಂಬಂಧಿತ ಸುದ್ದಿ