ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ತಲ ತಲಾಂತರದಿಂದ ನಂಬಿಕೊಂಡು ಬಂದ ಗಣೇಶನ ಮೂರ್ತಿ ಕಲೆ

ಕಲಘಟಗಿ: ಗಣೇಶನ ಹಬ್ಬ ಬರುತ್ತಿದ್ದಂತೆ ಕಲಘಟಗಿ ಪಟ್ಟಣದ ನಾಲಬಂದ ಓಣಿಯ ವಿಜಯ ಶೇಖಪ್ಪ ಬಡಿಗೇರ ರವರ ಕುಟುಂಬವು ಗಣೇಶನ ಮೂರ್ತಿ ತಯಾರಿಸವ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ಇವರ ಮನೆಯಲ್ಲಿ ಇವರ ತಂದೆ ಹಾಗೂ ಅಜ್ಜ ಮುತ್ತಜ್ಜರ ಕಾಲದಿಂದಲೂ ಈ ಒಂದು ಕಲೆಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ.

ಇವರು ನೈಸರ್ಗಿಕವಾದ ಉತ್ತಮ ಮಣ್ಣಿನಿಂದ ಗಣೇಶನ ಮೂರ್ತಿಯನ್ನು ತಯಾರಿಸುವುದೆ ಇವರ ಕಲೆಯಾಗಿದೆ. ಇವರ ಕುಟುಂಬದ ಹೆಣ್ಣು ಮಕ್ಕಳು ಕೂಡ ಈ ಒಂದು ಗಣೇಶನ ಮೂರ್ತಿ ತಯಾರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ವಿಶೇಷವಾಗಿದೆ. ಒಂದು ವರ್ಷಕ್ಕೆ ಸುಮಾರು ನೂರಕ್ಕಿಂತ ಹೆಚ್ಚು ಗಣೇಶನ ಮೂರ್ತಿಯನ್ನು ತಯಾರಿಸುತ್ತಾ ತಮ್ಮ ಜೀವನದ ಬಂಡಿ ಸಾಗಿಸುತ್ತಿದ್ದಾರೆ.

ಗಣೇಶನ ಹಬ್ಬ ಮುಗಿದ ನಂತರ ವಿಜಯ ಬಡಿಗೇರ ಹಾಗೂ ಅವರ ಸಹೋದರ ದೇವಸ್ಥಾನ ಹಾಗೂ ಗೋಡೆಗಳ ಮೇಲೆ ಚಿತ್ರ ಬಿಡಿಸುವುದು ಇವರ ಕಲೆಯಾಗಿದೆ. ಈಗಿನ ಪ್ಲಾಸ್ಟರ್ ಗಣೇಶ ಹಾಗೂ ಬ್ಯಾನರ್‌ಗಳ ಕಾಲದಲ್ಲಿಯೂ ಇವರ ಕುಟುಂಬವು ಚಿತ್ರಕಲೆ ಹಾಗೂ ಮಣ್ಣಿನ ಗಣೇಶ ತಯಾರಿಸುವ ಕಲೆಯನ್ನು ಮುಂದುವರೆಸಿಕೊಂಡು ಬಂದಿರುವುದು ವಿಶೇಷವಾಗಿದೆ.

ವರದಿ: ಉದಯ ಗೌಡರ

Edited By : Shivu K
Kshetra Samachara

Kshetra Samachara

19/08/2022 07:08 pm

Cinque Terre

16.94 K

Cinque Terre

0

ಸಂಬಂಧಿತ ಸುದ್ದಿ