ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 180 ಲಕ್ಷ ವೆಚ್ಚದಲ್ಲಿ ಗರಗ ಗುರು ಮಠದ ನಿರ್ಮಾಣಕ್ಕೆ ಚಾಲನೆ ನೀಡಿದ ಶಾಸಕ ಅಮೃತ

ಧಾರವಾಡ: ಧಾರವಾಡ ತಾಲೂಕಿನ ಗರಗ ಗ್ರಾಮದ ಗುರು ಮಡಿವಾಳೇಶ್ವರ ಕಲ್ಮಠಕ್ಕೆ ಸಂಬಂಧಿಸಿದ ಗುರು ಮಠದ ನಿರ್ಮಾಣ ಕಾಮಗಾರಿಗೆ ಗರಗದ ಚೆನ್ನಬಸವ ಸ್ವಾಮೀಜಿ, ಉಪ್ಪಿನ ಬೆಟಗೇರಿಯ ಕುಮಾರ ವಿರುಪಾಕ್ಷ ಸ್ವಾಮೀಜಿ ಸಮ್ಮುಖದಲ್ಲಿ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು.

ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ ಬರೊಬ್ಬರಿ 180 ಲಕ್ಷ ಅನುದಾನದಲ್ಲಿ ಭವ್ಯವಾಗಿ ದೇವಸ್ಥಾನ ನಿರ್ಮಾಣ ಕಾಮಗಾರಿ ನಡೆಯಲಿದೆ.

ಈ ವೇಳೆ ಉಭಯ ಶ್ರೀಗಳು ಮಾತನಾಡಿ, ಪುರಾತನ ಇತಿಹಾಸವನ್ನು ಹೊಂದಿರುವ ಗರಗದ ಶ್ರೀ ಮಠವು ಅಸಂಖ್ಯಾತ ಭಕ್ತ ಸಮೂಹವನ್ನು ಒಳಗೊಂಡಿದೆ. ಗರಗ ಶ್ರೀ ಮಠದ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ನಿಂತಿರುವ ಶಾಸಕ ಅಮೃತ ದೇಸಾಯಿಯವರು ಧಾರ್ಮಿಕ ಕ್ಷೇತ್ರಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

Edited By :
Kshetra Samachara

Kshetra Samachara

02/08/2022 09:44 pm

Cinque Terre

22.59 K

Cinque Terre

3

ಸಂಬಂಧಿತ ಸುದ್ದಿ