ನವಲಗುಂದ: ಶ್ರೀ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿಗಳ 141ನೇ ಆರಾಧನಾ ಮಹೋತ್ಸವ 2022 ಜುಲೈ ಮೂರು ಹಾಗೂ ನಾಲ್ಕನೇ ತಾರೀಕಿನಂದು ನವಲಗುಂದ ಪಟ್ಟಣದ ಶ್ರೀ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿಗಳ ಮಠದಲ್ಲಿ ಅತೀ ವಿಜೃಂಭಣೆಯಿಂದ ಜರುಗಲಿದೆ.
ಹೌದು, ಜುಲೈ ಮೂರು ರವಿವಾರದಂದು ಧಾರ್ಮಿಕ ಸಭೆಯ ಪಲ್ಲಕ್ಕಿ ಮತ್ತು ಮೇಣ ಉತ್ಸವ ಜರುಗಲಿದ್ದು, ಸೋಮವಾರ ಬೆಳಗ್ಗೆ ಸಂಗೀತ ಸಭೆ ಜರುಗಲಿದೆ. ಎರಡು ದಿನಗಳ ಕಾಲ ಧಾರ್ಮಿಕ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗುವುದು ಎಂದು ಅಧಿಕೃತವಾಗಿ ಆಡಳಿತ ಮಂಡಳಿ ತಿಳಿಸಿದೆ.
ಉತ್ಸವದ ದಿವ್ಯ ಸಾನಿಧ್ಯವನ್ನು ವಿನಯ ಗುರೂಜಿ ಹಾಗೂ ಸದಾಶಿವಾನಂದ ಮಹಾಸ್ವಾಮಿಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರೊಂದಿಗೆ ಹಲವು ಗಣ್ಯರು ಆಗಮಿಸುವರು. ಇದರೊಂದಿಗೆ ಹಲವು ಕಾರ್ಯಕ್ರಮಗಳನ್ನು ಇದೆ ಉತ್ಸವದಲ್ಲಿ ಹಮ್ಮಿಕೊಳ್ಳಲಾಗಿದೆ.
Kshetra Samachara
27/06/2022 07:17 pm