ನವಲಗುಂದ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನವಲಗುಂದ ತಾಲೂಕಾ ಘಟಕದ ವತಿಯಿಂದ ಪಟ್ಟಣದ ಗವಿಮಠದ ಸಿದ್ದಲಿಂಗೇಶ್ವರ ದಾಸೋಹ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವಗುರು ಬಸವೇಶ್ವರರ ಜಯಂತಿ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಗಣ್ಯರಿಗೆ ಸನ್ಮಾನ ಕಾರ್ಯಕಮವನ್ನು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಉದ್ಘಾಟಿಸಿದರು.
ಇನ್ನು ಉದ್ಘಾಟನೆ ನಂತರ ಮಾತನಾಡಿದ ಮುನೇನಕೊಪ್ಪ ಅವರು, ಉತ್ತಮ ಸಮಾಜಕ್ಕಾಗಿ ಬಸವೇಶ್ವರ ಅವರ ತತ್ವಗಳನ್ನು ಪಾಲಿಸಬೇಕು ಎಂದು ತಿಳಿಸಿ, ಕೆಲಸ ಹುಡುಕುತ್ತ ನಮ್ಮ ಕ್ಷೇತ್ರದ ಯುವಕರು ವಲಸೆ ಹೋಗುವುದನ್ನು ತಪ್ಪಿಸಲು ಸರ್ಕಾರದಿಂದ ನಮ್ಮ ಕ್ಷೇತ್ರದಲ್ಲಿಯೇ ಜವಳಿ ಪಾರ್ಕ್ ಪ್ರಾರಂಭಿಸಿ, ಸುಮಾರು 5000 ಜನರಿಗೆ ಉದ್ಯೋಗ ವದಗಿಸುವಂತ ಕೆಲಸ ಮಾಡಿದ್ದೇನೆ ಎಂದರು. ಹಾಗೂ ನಾವೂ ಯಾವುದೇ ಪಕ್ಷ ಬೇದಬಾವ ಮಾಡದೇ ಸಮಾಜ ಬೆಳೆಸುವಂತ ಕೆಲಸ ಮಾಡೋಣಾ ಎಂದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಗವಿಮಠದ ಶ್ರೀಗಳು ಬಸವಲಿಂಗ ಮಹಾಸ್ವಾಮಿಗಳು ವಹಿಸಿದ್ದರೇ, ಅವರೊಂದಿಗೆ ರಾಷ್ಟ್ರಿಯ ಕಾರ್ಯದರ್ಶಿ ರೇಣುಕಾ ಪ್ರಸಾದ, ಜಿಲ್ಲಾ ಅಧ್ಯಕ್ಷ ಗುರುರಾಜ ಹುನಸಿಮರದ, ತಾಲೂಕಾ ಘಟಕದ ಅಧ್ಯಕ್ಷ ಪಿ.ಏನ್.ಹಕ್ಕರಕಿ, ಸಮಾಜದ ಮುಖಂಡರಾದ ಸಿ ಎಸ್ ಪಾಟೀಲ, ವಿಜಯ ಕುಲಕರ್ಣಿ, ಬಾಪೂಗೌಡ ಪಾಟೀಲ, ಲಿಂಗರಾಜ ಸರದೇಸಾಯಿ, ಅಣ್ಣಪ್ಪ ಭಾಗಿ, ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ, ಉಪಾಧ್ಯಕ್ಷೆ ಪೂಜಾರ, ಸಮಾಜದ ಗಣ್ಯರು ಉಪಸ್ಥಿತರಿದ್ದರು.
Kshetra Samachara
28/05/2022 07:07 pm