ಧಾರವಾಡ: ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದು ಖುಷಿಯ ವಿಚಾರ. ಇದಕ್ಕಾಗಿ ಬಿಜೆಪಿ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಅವರು, ಕರ್ನಾಟಕದಲ್ಲಿ ಬುಡಕಟ್ಟು ಹಾಗೂ ದಲಿತರನ್ನು ಕ್ರಿಶ್ಚಿಯನ್ನರು ಗುರಿಯಾಗಿಸಿಕೊಂಡು ಮತಾಂತರ ಮಾಡುತ್ತಿದ್ದರು. ಎಲ್ಲ ಜಾತಿಗೂ ಈ ಮತಾಂತರ ಆವರಿಸಿತ್ತು. ಬಹಳ ದೊಡ್ಡ ಪ್ರಮಾಣದಲ್ಲಿ ಕ್ರಿಶ್ಚಿಯನ್ ಮತಾಂತರ ಎಂಬ ಕ್ಯಾನ್ಸರ್ ಹರಡುತ್ತಿದೆ. ಸರ್ಕಾರ ಈ ಕಾಯ್ದೆಯಲ್ಲಿ ಕಟ್ಟುನಿಟ್ಟಿನ ನಿಯಮ ಹಾಕಿದ್ದು ಸ್ವಾಗತಾರ್ಹ ಎಂದಿದ್ದಾರೆ.
ಕಾಯ್ದೆಯಲ್ಲಿ 10 ವರ್ಷ ಶಿಕ್ಷೆ ಹಾಕಿದ್ದಾರೆ. ಶಾಲೆ, ಕಾಲೇಜಿನಲ್ಲಿ ಆಮಿಷ ಒಡ್ಡುವುದು, ಮದುವೆಗೆ ಆಮಿಷ ಒಡ್ಡುವುದನ್ನು ಈ ನಿಯಮದಲ್ಲಿ ಅಳವಡಿಸಿದ್ದು ಒಳ್ಳೆಯದಾಗಿದೆ. ಮತಾಂತರ ಮಾಡುವುದು ಅಷ್ಟೇ ಅಲ್ಲ, ಆಸೆ, ಆಮಿಷ ಒಡ್ಡುವುದೂ ಮತಾಂತರವೇ ಆಗಿದೆ. ಕ್ರಿಶ್ಚಿಯನ್ನರು ಈ ಕೆಲಸ ಮಾಡುತ್ತಿದ್ದು, ಇದನ್ನು ತಡೆಯಬೇಕಾಗಿದೆ. ಇದನ್ನು ಹದ್ದುಬಸ್ತಿನಲ್ಲಿಡಬೇಕು. ಸಾವಿರಾರು ಚರ್ಚ್ ಇರುವ ಬಗ್ಗೆ ಸರ್ಕಾರಕ್ಕೆ ನಾವು ಮಾಹಿತಿ ನೀಡುತ್ತೇವೆ ಎಂದಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/05/2022 09:32 pm