ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬೇಡಿದವರಿಗೆ ವರ ನೀಡಿ, ವಿಘ್ನ ದೂರ ಮಾಡುವ ದಾರಾವತಿ ಹುನುಮಪ್ಪ

ಹುಬ್ಬಳ್ಳಿ: ಪರಮಾತ್ಮ ಕಣ್ಣಿಗೆ ಕಾಣದೆ ಇದ್ದರು ಆತನ ಮೇಲೆ ಅಪಾರ ನಂಬಿಕೆ ವಿಶ್ವಾಸ. ನಮಗೆ ಜೀವವನ್ನು ಭಿಕ್ಷೆ ಯಾಗಿ ನೀಡಿರುವ ಈ ದೇವರನ್ನು‌ ನಂಬದೆ ಇರಲೂ ಸಾಧ್ಯವೆ. ಹಲವಾರು ಕಷ್ಟು ,ಸುಖ, ನೋವು ಕೊಟ್ಟು, ನಿವಾರಣೆ ಮಾಡುವನೇ ಆ ಅಂತರಾತ್ಮ. ಆದರೆ ಈ ಆಂಜನೇಯಗೆ ಶರಣಾದರೆ ಸಾಕು ಕಷ್ಟುಗಳು ದೂರಾಗುತ್ತವೆ. ಮಾಡಿಕೊಂಡ ಹರಕೆಗಳು ಪೂರೈಸುತ್ತವೆ. ಪವಾಡಗಳ ಆಂಜನೇಯನ ಎಂದೇ ಪ್ರಸಿದ್ಧಿಯಾಗಿರುವ ಈ ಹನುಮಾನ ಯಾರು.... ಯಾಕೆ ಪವಾಡ ಆಂಜನೇಯ ಎಂದು ಕರೆಯುತ್ತಾರೆ ಗೊತ್ತಾ ಈ ಸ್ಟೋರಿ ನೋಡಿ...

ಹೌದು, ನಂಬಿ ಬಂದ ಭಕ್ತರು ಬರಿಗೈಲಿ ಹೋದ ಉದಾಹರಣೆಗಳೇ ಇಲ್ಲವಂತೆ. ಈ ಆಂಜನೇಯನ್ನು ಭಕ್ತಯಿಂದ ಬೇಡಿಕೊಂಡರೆ ತಥಾಸ್ತು ಎನ್ನುತ್ತಾನೆ. ಈತನ ಮಹಿಮೆ ಎಷ್ಟು ವರ್ಣಿಸಿದರೂ ಸಾಲದು. ಸುಮಾರು 400 ವರ್ಷಗಳ ಹಿಂದೆಯೇ ಈ ಆಂಜನೇಯ ನೆಲೆಸಿರುವುದು ಹುಬ್ಬಳ್ಳಿಯ ಗೋಕುಲ ಗ್ರಾಮದ ದಾರಾವತಿಯಲ್ಲಿ. ಜನರ ಕಷ್ಟಗಳನ್ನು ನಿವಾರಣೆ ಮಾಡುವ ಮೂಲಕ ಜನರ ಮನಸ್ಸು ಸೆಳೆದಿದೆ.

ಮಕ್ಕಳ ಭಾಗ್ಯವಿಲ್ಲದ ಮಹಿಳೆಯರು ಎಂದು ತೆಲೆ ಬಾಗಿದರೆ ಸಾಕು ಸಂತಾನ ಪ್ರಾಪ್ತಿಯಾಗಿರುವ ಎಷ್ಟೋ ಉದಾಹರಣೆಗಳು ಇವೆ. ಅಷ್ಟೇ ಅಲ್ಲದೆ ಸುಮಾರು ವರ್ಷಗಳಿಂದ ಎಲ್ಲ ಆಸ್ಪತ್ರೆ ಗಳಿಗೆ ಅಲೆದು ಕೊನೆಗೆ , ಯಾರೋ ಒಬ್ಬರ ಹಿರಿಯರ ಮಾತು ಕೇಳಿ ದಾರಾವತಿ ಆಂಜನೇಯ ದೇವಸ್ಥಾನಕ್ಕೆ ಬಂದು ದಂಪತಿಗಳು ಬೇಡಿಕೊಂಡಿದ್ದಾರೆ. ವಾಯುಪುತ್ರ ನಾಗರ ಹಾವಿನ ರೂಪದಲ್ಲಿ ಬಂದು ಈ ದಂಪತಿಗೆ ಆಶೀರ್ವಾದ ಮಾಡಿದ್ದಾನಂತೆ. ಆಗ ಅವಳಿ ಜವಳಿ ಮಕ್ಕಳಾದ ಉದಾಹರಣೆವಿದೆ.

ಎಷ್ಟೆ ಶಿಕ್ಷಣ ಪಡೆದರೂ ಕೆಲಸ ಸಿಗದೆ ಅಲೆದಾಡಿ ಜೀವನದಲ್ಲಿ ಜಿಗುಪ್ಸೆ ಉಂಟಾಗಿರುವವರು ಬಂದು ಆಂಜನೇಯನಿಗೆ ಶರಣಾಗಿ , ಉದ್ಯೋಗ ಪಡೆದು ಜೀವನ ರೂಪಸಿಕೊಂಡಿದ್ದಾರೆ. ಹೀಗೆ ಆತನ ಕೃಪಾರ್ಶೀವಾದದಿಂದ ಉದ್ಯೋಗ ಪಡೆದು ಉನ್ನತ ಹುದ್ದೆಯಲ್ಲಿರುವ ಭಕ್ತರ ದಂಡೆ ಇದೆ.

ಇನ್ನೂ ಈ ದೃಶ್ಯಗಳಲ್ಲಿ ನೀವು ನೋಡ್ತಿರ ಬಹುದು ಹೋರಿಯೊಂದು ದಾರಾವತಿ ವಾಯುಪುತ್ರನಿಗೆ ಸಾಷ್ಟಾಂಗ ನಮಸ್ಕಾರ ಹಾಕುವುದು, ಸಾಲಾಗಿ ಮಲಗಿದ ಭಕ್ತರನ್ನು ಆಶಿರ್ವದಿಸಿ ಒಬ್ಬರಿಗೂ ಮುಟ್ಟದೆ ದಾಟುತ್ತಿದೆ. ಆಂಜನೇಯನನ್ನು ನಂಬಿ ತಮ್ಮ ಕಷ್ಟಗಳು ದೂರವಾಗಲೆಂದು ಅಡ್ಡ ಮಲಗುತ್ತಾರೆ. ಆ ಹೋರಿ ಇವರೆಲ್ಲರನ್ನು ದಾಟಿ ನೇರವಾಗಿ ಆಂಜನೇಯನ ಗರ್ಭಗುಡಿಗೆ ಹೋಗುತ್ತದೆ ಹೀಗೆ ಹಲವಾರು ಪವಾಡಗಳಿಗೆ ಸಾಕ್ಷಿಯಾಗಿದ್ದಾನೆ ನಮ್ಮ ದಾರಾವತಿ ಆಂಜನೇಯ.

ಅಷ್ಟೇ ಅಲ್ಲದೆ ಉದ್ಯಮಿಯೊಬ್ಬ ತಾನು ಮಾಡುತ್ತಿರುವ ಕೆಲಸದಲ್ಲಿ ವಿಘ್ನಗಳಿಗೆ ಬೇಸತ್ತು, ಜೀವನವೇ ಸಾಕು ಎಂದು ಕುಳಿತ್ತಾಗ ಆ ಜೀವಕ್ಕೆ ಮರು ಜೀವ ನೀಡಿದ್ದು ಈ ಪವಾಡ ದಾರಾವತಿ ವೀರಾಂಜನೇಯ‌. ಭಕ್ತಿಯಿಂದ ಬೇಡಿಕೊಂಡು ತನ್ನ ಕೆಲಸಕ್ಕೆ ಕೈ ಹಾಕಿದ್ದಾರೆ. ಈಗ ಆ ವ್ಯಕ್ತಿ ಉತ್ತಮ ಮಟ್ಟಕ್ಕೆ ಬೆಳೆದಿದ್ದಾರೆ. ಭಕ್ತರಿಗೆ ಬೇರೆ ಬೇರೆ ರೂಪದಲ್ಲಿ ಬಂದು ಕಷ್ಟ ಬಗೆ ಹರಿಸುತ್ತಾನೆ ಈ ಆಂಜನೇಯ.

ಈ ಪವಾಡ ಪುರುಷ ದಾರಾವತಿ ಆಂಜನೇಯನ ಬಳಿ ಕಷ್ಟ ಎಂದು ಹೋದರೆ ಸಾಕು ನೀರಾಳವಾಗಿ ಈಡೇರಿಸುತ್ತಾನೆ. ಅದೆಷ್ಟೋ ಬೇಡಿ ಬಂದ ಭಕ್ತರಿಗೆ ಬರಿಕೈಯಲ್ಲಿ ಕಳಿಸಿಲ್ಲವಂತೆ ದಾರಾವತಿ ಆಂಜನೇಯ. ಸದ ಭಕ್ತರು ನಿಮ್ಮ ಕಷ್ಟಗಳನ್ನು ಭಕ್ತಿಯಿಂದ ಬೇಡಿಕೊಂಡು ಈಡೇರಿಸಿಕೊಳ್ಳಬಹುದೆಂದ ದಾರಾವತಿ ಹನುಮಾನ ಆಡಳಿತ ಮಂಡಳಿ ಹೇಳುತ್ತಾರೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/05/2022 06:02 pm

Cinque Terre

51.97 K

Cinque Terre

16

ಸಂಬಂಧಿತ ಸುದ್ದಿ