ನವಲಗುಂದ: ನವಲಗುಂದ ತಾಲ್ಲೂಕಿನ ಬ್ಯಾಲ್ಯಾಳ ಗ್ರಾಮದ ಶ್ರೀ ಮಾರುತಿ ದೇವರ ಓಕಳಿ ಸಂಭ್ರಮದಲ್ಲಿ ಗ್ರಾಮಸ್ಥರು ಬಣ್ಣದ ನೀರನ್ನು ಎರಚುವ ಮೂಲಕ ಖುಷಿಯಿಂದ ಆಟವಾಡಿ ಸಂತಸ ಪಟ್ಟರು.
ದೇವಸ್ಥಾನದ ಎದುರು ಬಣ್ಣದ ಹೊಂಡದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ, ಸುತ್ತಲೂ ನಿಂತ ಯುವಕರು ಬಕೆಟ್‌ಗಳಿಂದಲೇ ಬಣ್ಣದ ನೀರನ್ನು ತೆಗೆದುಕೊಂಡು ತಾ ಮುಂದು, ನಾ ಮುಂದು ಎನ್ನುವಂತೆ ಬಣ್ಣದ ನೀರು ಎರಚಿ ಸಂಭ್ರಮಿಸಿದರು. ನೋಡಲು ಆಗಮಿಸಿದವರ ಮೇಲೆ ಬಕೆಟ್‌ನಿಂದ ಬಣ್ಣವನ್ನು ಎರಚಲಾಯಿತು. ಮಕ್ಕಳೂ, ಯುವಕರು, ಮಹಿಳೆಯರು ಸಹ ಬಣ್ಣವನ್ನು ಎರಚಾಡಿ ಸಂಭ್ರಮಪಟ್ಟರು.
Kshetra Samachara
08/05/2022 12:20 pm