ಹುಬ್ಬಳ್ಳಿ: ರಾಜ್ಯದಲ್ಲಿ ದಿನೇ ದಿನೇ ಒಂದಿಲ್ಲೊಂದು ಕೋಮುಗಲಭೆ ಸೃಷ್ಟಿಸುವ ಕೃತ್ಯಗಳು ನಡೆಯುತ್ತಲೇ ಇವೆ. ಅಷ್ಟೇ ಅಲ್ಲದೆ ಹುಬ್ಬಳ್ಳಿ ಧಾರವಾಡದಲ್ಲಿ ಕೋಮುಗಲಭೆಯ ವಾತಾವರಣ ಸೃಷ್ಟಿಯಾಗಿ ಬಿಟ್ಟಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ನಡೆದ ಕೋಮುಗಲಭೆಯಿಂದ ವಾಣಿಜ್ಯ ನಗರಿ ಜನರು ಭಯಬೀತರಾಗಿದ್ದರು.
ಈ ಹಿನ್ನೆಲೆಯಲ್ಲಿಯೇ "ಹಿಂದೂ-ಮುಸ್ಲಿಂ ಎಲ್ಲರೂ ಒಂದೇ ತಾಯಿಯ ಮಕ್ಕಳಿದ್ದಂತೆ. ನಾವೆಲ್ಲರೂ ಭಾರತಿಯರು. ಒಂದಾಗಿ ಬಾಳಬೇಕೆಂದು" ಸರ್ವಧರ್ಮದ ಹಿಂದೂ ಸ್ವಾಮೀಜಿಗಳು ಮತ್ತು ಇಸ್ಲಾಂ ಧರ್ಮದ ಮೌಲ್ವಿಗಳು ಇಂದು ನಗರದಲ್ಲಿ ಒಂದಾಗಿ ಕೈ ಕೈ ಹಿಡಿದು,, "ಸಾರೇ ಜಹಾನ್ ಸೆ ಅಚ್ಚಾ ಹಿಂದುಸ್ತಾನ ಹಮಾರಾ ಹಮ್ ಬುಲಬುಲೇನ್ ಹೈ ಇಸ್ ಕೆ, ಯೇ ಗುಲ್ಸೀತಾನ ಹಮಾರಾ. ಯೇ ಗುಲ್ಸೀತಾನ ಹಮಾರಾ ಹಮಾರಾ." ಅನ್ನೋ ದೇಶಭಕ್ತಿ ಗೀತೆ ಹೇಳುವುದರ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾಕ್ಷಿಯಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/04/2022 06:25 pm