ಕುಂದಗೋಳ : ನೂತನ ವರ್ಷದ ಮೊದಲ ಅಂಗಾರಕ ಸಂಕಷ್ಟಿ ಅಂಗವಾಗಿ ಕುಂದಗೋಳ ಪಟ್ಟಣದ ಮಾರ್ಕೇಟ್ ರಸ್ತೆಯ ಗಣೇಶನಿಗೆ ಭಕ್ತರಿಂದ ಗುಲಾಬಿ ಹೂವಿನ ಪೂಜೆ ಸಮರ್ಪಿಸಲಾಗಿದ್ದು, ಗಣೇಶನ ದರ್ಶನಕ್ಕೆ ಭಕ್ತರ ದಂಡು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನದ ಎಡೆಗೆ ಆಗಮಿಸುತ್ತಿದೆ.
ಹೌದು,ಅಂಗಾರಕ ಸಂಕಷ್ಟಿ ನಿಮಿತ್ತವಾಗಿ ಗಣೇಶನಿಗೆ ಇಂದು ಗಜಾನನ ಭಜನಾ ಸಂಘದ ಯುವಕರು ಬೆಳಿಗ್ಗೆಯೆ ಪೂಜಾಭಿಷೇಕ ನೆರವೇರಿಸಿ, ಕೆಂಪು ಹಳದಿ ಗುಲಾಬಿ ಹೂಗಳಿಂದ ಅಲಂಕಾರ ಮಾಡಿ ತಮ್ಮ ಭಕ್ತಿ ಸೇವೆ ಸಲ್ಲಿಸಿದ್ದಾರೆ.
ಕುಂದಗೋಳ ಪಟ್ಟಣ ಸೇರಿದಂತೆ ಹಳ್ಳಿಗರು ಸಹ ಗಣೇಶನ ದರ್ಶನ ಪಡೆಯಲು ಆಗಮಿಸುತ್ತಿದ್ದು ಮದುವೆ, ಮಕ್ಕಳು ಇತ್ಯಾದಿ ಬೇಡಿಕೆಗಳನ್ನು ಅಂಗಾರಕ ಸಂಕಷ್ಟಿ ನಿಮಿತ್ತವಾಗಿ ಗಣೇಶನಿಗೆ ಅರ್ಪಿಸಿ ಪೂಜೆ ಕೈಗೊಳ್ಳುತ್ತಿದ್ದಾರೆ.
Kshetra Samachara
19/04/2022 12:25 pm