ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮಹಿಳೆಯರೇ ನೆರವೇರಿಸಿದ ತಾಯಿ ಉಡಚಮ್ಮಾದೇವಿ ರಥೋತ್ಸವ

ಕುಂದಗೋಳ : ಬು.ತರ್ಲಘಟ್ಟ ಗ್ರಾಮದ ಆರಾಧ್ಯದೇವತೆ ಪವಾಡರೂಪಿಣಿ ಉಡಚಮ್ಮಾ ದೇವಿಯ ಜಾತ್ರಾ ಮಹೋತ್ಸವ ಹಾಗೂ ಪರಮಪೂಜ್ಯ ಫಕೀರ ಸಿದ್ಧರಾಮ ಮಹಾಸ್ವಾಮಿಗಳ ತುಲಾಭಾರ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ಕೆಳದೆರೆಡು ವರ್ಷಗಳಿಂದ ಮಂಕಾಗಿದ್ದ ಬು.ತರ್ಲಘಟ್ಟ ಗ್ರಾಮದ ಐಶ್ವರ್ಯ ದೇವತೆ ಉಡಚಮ್ಮಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ತಾಯಿ ದೇವಿಗೆ ಬೆಳಿಗ್ಗೆಯೆ ಪೂಜಾಭಿಷೇಕ ಅರ್ಚನೆ ನೆರವೇರಿದವು.

ಬಳಿಕ ಸಕಲ ಭಕ್ತಾಧಿಗಳ ಸಮ್ಮುಖದಲ್ಲಿ ಪರಮ ಪೂಜ್ಯ ಪಕೀರ ಸಿದ್ದರಾಮ ಮಹಾಸ್ವಾಮಿಗಳ ತುಲಾಭಾರ ನಡೆಯಿತು. ಜಾತ್ರೆಯುದ್ಧಕ್ಕೂ ಡೊಳ್ಳು ಮೇಳಗಳ ಮೆರವಣಿಗೆ ನೋಡುಗರ ಕಣ್ಮನ ಸೆಳೆಯಿತು.

ವಿಶೇಷವೆಂದ್ರೆ ತಾಯಿ ಉಡಚಮ್ಮಾ ದೇವಿಯ ರಥವನ್ನು ಮಹಿಳೆಯರೇ ಎಳೆಯುವುದು ಇಲ್ಲಿನ ಸಂಪ್ರದಾಯವಾಗಿದ್ದು ಮಹಿಳೆಯರು ಮಕ್ಕಳು ಒಂದಾಗಿ ರಥೋತ್ಸವ ಕಾರ್ಯಕ್ರಮ ನೆರವೇರಿಸಿ ಭಕ್ತಿ ಸಾಕ್ಷಾತ್ಕಾರದ ಕ್ಷಣಗಳಿಗೆ ಸಾಕ್ಷಿಯಾದರು.

ವಿವಿಧ ಮಠಾಧೀಶರ ಸಮ್ಮುಖದಲ್ಲಿ ಬು.ತರ್ಲಘಟ್ಟ, ನೆಲಗುಡ್ಡ, ಬು.ಕೊಪ್ಪ ಗ್ರಾಮದ ಸಕಲ ಭಕ್ತಾಧಿಗಳು ಜಾತ್ರೆಯಲ್ಲಿ ಪಾಲ್ಗೊಂಡು ಪ್ರಸಾದ ಸವಿದು ಪುನೀತರಾದರು.

Edited By :
Kshetra Samachara

Kshetra Samachara

18/04/2022 03:18 pm

Cinque Terre

21.72 K

Cinque Terre

2

ಸಂಬಂಧಿತ ಸುದ್ದಿ