ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಶ್ರೀ ತಂಗೆಮ್ಮ ದೇವಿ ರಥೋತ್ಸವ ಹಿನ್ನೆಲೆಯಲ್ಲಿ, ಬಂದ ಭಕ್ತರಿಗೆ ಮುಸ್ಲಿಂ ಸಮುದಾಯ ಸಿಹಿ ಹಾಗೂ ತಂಪು ಪಾನೀಯಗಳನ್ನು ನೀಡಿ ಸತ್ಕಾರ ಮಾಡುವುದರ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
ತಂಗೆಮ್ಮ ದೇವಿ ಮತ್ತು ಅಕ್ಕಮ್ಮದೇವಿ ಜಾತ್ರೆ ನಿಮಿತ್ತ ಪಂಚಾಮೃತ ಅಭಿಷೇಕ , ವಿಶೇಷ 7 ಪೂಜೆ ನೆರವೇರಿಸಲಾಗುತ್ತದೆ. ಸುಮಾರು ವರ್ಷಗಳಿಂದ ಹಿಂದೂ-ಮುಸ್ಲಿಂ ಸಮುದಾಯದವರು ಒಗ್ಗಟ್ಟಿನಿಂದ ತೆಂಗೆಮ್ಮನ ಜಾತ್ರೆಯನ್ನು ಆಚರಿಸುತ್ತಾ ಬಂದಿದ್ದು, ಈ ವರ್ಷವೂ ಸಹ ಬಂದ ಭಕ್ತರಿಗೆ ಮುಸ್ಲಿಂ ಮುಖಂಡರ ನೇತೃತ್ವದಲ್ಲಿ ಸಿಹಿ ಹಾಗೂ ತಂಪು ಪಾನಿಯ ನೀಡಿ ಹಿಂದೂ ಮುಸ್ಲಿಂ ನಾವೆಲ್ಲರೂ ಒಂದೇ ಎಂದು ಸಾರಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/04/2022 12:32 pm