ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನುಗ್ಗಿಕೇರಿ ಗಲಾಟೆ- ಅಂಗಡಿಗಳು ಬೇರೆಡೆ ಶಿಫ್ಟ್‌

ಧಾರವಾಡ: ಕಳೆದ ಕೆಲ ದಿನಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದ ಧಾರವಾಡದ ಪ್ರತಿಷ್ಠಿತ ನುಗ್ಗಿಕೇರಿ ದೇವಸ್ಥಾನದ ಗಲಾಟೆಗೆ ಇದೀಗ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.

ನುಗ್ಗಿಕೇರಿ ದೇವಸ್ಥಾನದ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕೊಡಬಾರದು ಎಂದು ಶ್ರೀರಾಮ ಸೇನೆ ಕಾರ್ಯಕರ್ತರು ಆಗ್ರಹಿಸಿ, ಮುಸ್ಲಿಂ ವ್ಯಾಪಾರಿ ನಬಿಸಾಬ್ ಅವರ ಕಲ್ಲಂಗಡಿ ಹಣ್ಣುಗಳನ್ನೂ ಒಡೆದು ಹಾಕಿದ್ದರು. ಈ ಸಂಬಂಧ ಸಾಕಷ್ಟು ಬೆಳವಣಿಗೆಗಳು ನಡೆದು, ನುಗ್ಗಿಕೇರಿಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೂ ಅವಕಾಶ ಕೊಡಬೇಕು ಎಂದು ಮುಸ್ಲಿಂ ನಾಯಕರು ಹಾಗೂ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕೊಡಬಾರದು ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ದೇವಸ್ಥಾನ ಟ್ರಸ್ಟ್ ಕಮಿಟಿಯವರಿಗೆ ಮನವಿ ಸಲ್ಲಿಸಿದ್ದರು.

ಉಭಯ ಸಂಘಟನೆಗಳ ಮನವಿ ಪಡೆದಿದ್ದ ದೇವಸ್ಥಾನ ಟ್ರಸ್ಟ್ ಕಮಿಟಿಯವರು ನಿನ್ನೆ ಸುಧೀರ್ಘವಾಗಿ ಚರ್ಚೆ ನಡೆಸಿ ದೇವಸ್ಥಾನದ ಆವರಣದಲ್ಲಿ ಯಾವ ಧರ್ಮದವರೂ ಅಂಗಡಿ ಹಚ್ಚುವಂತಿಲ್ಲ ಎಂಬ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.

ಸದ್ಯ ದೇವಸ್ಥಾನದ ಆವರಣದಲ್ಲಿ ಎಲ್ಲ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಶನಿವಾರ ನುಗ್ಗಿಕೇರಿ ಆಂಜನೇಯನ ಜಾತ್ರಾ ಮಹೋತ್ಸವ ಕೂಡ ನಡೆಯುತ್ತಿದೆ. ಈ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಯಾರೂ ಅಂಗಡಿ ಹಚ್ಚುವಂತಿಲ್ಲ ಎಂಬ ಮಹತ್ವದ ತೀರ್ಮಾನವನ್ನು ದೇವಸ್ಥಾನ ಟ್ರಸ್ಟ್ ಕಮಿಟಿಯವರು ಕೈಗೊಂಡಿದ್ದಾರೆ. ಸದ್ಯ ಅಲ್ಲಿಂದ ಸ್ಥಳಾಂತರಗೊಂಡಿರುವ ವ್ಯಾಪಾರಿಗಳು ದೇವಸ್ಥಾನದ ಜಾಗ ಬಿಟ್ಟು ಬೇರೆ ಬೇರೆ ಕಡೆಗಳಲ್ಲಿ ತಮ್ಮ ಅಂಗಡಿಗಳನ್ನು ಹಾಕಿಕೊಳ್ಳುವ ದೃಶ್ಯಗಳೂ ಕಂಡು ಬಂದವು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/04/2022 07:51 pm

Cinque Terre

59.82 K

Cinque Terre

9

ಸಂಬಂಧಿತ ಸುದ್ದಿ