ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

25 ವರ್ಷಗಳ ನಂತರ ಅರಳಿಕಟ್ಟಿ ಓಣಿಯ ಗ್ರಾಮದೇವತೆಯ ಜಾತ್ರಾ ಮಹೋತ್ಸವ

ಹುಬ್ಬಳ್ಳಿ : ನಗರದ ಅರಳಿಕಟ್ಟಿ ಓಣಿಯ ಗ್ರಾಮದೇವತೆಗಳಾದ ಶ್ರೀ ದ್ಯಾಮವದೇವಿ ಹಾಗೂ ಶ್ರೀ ದುರ್ಗಮ್ಮದೇವಿ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮ ಏಪ್ರಿಲ್ 11 ರಿಂದ 15 ರವರೆಗೆ ನಡೆಯಲಿದೆ ಎಂದು ಕಾರ್ಯಕ್ರಮದ ಸಹ ಸಂಚಾಲಕ ವಿನಾಯಕ ಲದ್ವಾ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಗ್ರಾಮ ದೇವತೆಗಳ ಶಕ್ತಿ ಹಾಗೂ ಪವಾಡಗಳು ಜನರಲ್ಲಿ ನಂಬಿಕೆಯನ್ನು ಮೂಡಿಸಿದೆ. ವಿಶೇಷವಾಗಿ ಆಷಾಢ ಮಾಸದಲ್ಲಿ ಹಾಗೂ ದಸರಾ ಹಬ್ಬದ ಸಂದರ್ಭದಲ್ಲಿ ಆದಿಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು, ಅದರಂತೆ ಅನ್ಯಧರ್ಮಿಯರು ಹಾಗೂ ಕರ್ನಾಟಕ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ವಿಶೇಷ ಪೂಜೆ ಹರಕೆಗಳನ್ನು ತೀರಿಸುವ ಮೂಲಕ ಭಕ್ತಿ ಮೆರೆಯುತ್ತಾರೆ.

ಇದೀಗ 25 ವರ್ಷಗಳ ನಂತರ ಅರಳಿಕಟ್ಟಿ ಓಣಿಯ ಭಕ್ತಾದಿಗಳು ಹಾಗೂ ಗುರು ಹಿರಿಯರು ಸೇರಿಕೊಂಡು ಜಾತ್ರಾ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದರು.

Edited By : Shivu K
Kshetra Samachara

Kshetra Samachara

09/04/2022 01:17 pm

Cinque Terre

19.58 K

Cinque Terre

2

ಸಂಬಂಧಿತ ಸುದ್ದಿ