ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ತ್ರಿಖಾನಿ ನಂದೀಶ್ವರ ದೇವಸ್ಥಾನದಲ್ಲಿ ಕಾಮಣ್ಣನ ಗುಗ್ಗಳ

ಕುಂದಗೋಳ : ನಾವು ನಿವೇಲ್ಲ ಈಗಾಗಲೇ ಹೋಳಿ ಹುಣ್ಣಿಮೆ ಹಬ್ಬ, ಕಾಮ ದಹನ ಮುಗಿಸಿ ಓಕೋಳಿ ಆಟವಾಡಿ ಸಂಭ್ರಮಿಸಿದ್ದೇವೆ. ಅದರಂತೆ ಕುಂದಗೋಳ ಪಟ್ಟಣದಲ್ಲಿ ಹೋಳಿ ಹುಣ್ಣಿಮೆ ನಂತರದ ಅಮಾವಾಸ್ಯೆ ಅಂಗವಾಗಿ ಜಗತ್ತಿನ ಏಳ್ಗೆಗಾಗಿ ಕಾಮಣ್ಣನ ಗುಗ್ಗಳ ನಡೆದಿದೆ.

ಹೌದು ! ಅನಾದಿಕಾಲದಿಂದಲೂ ಕುಂದಗೋಳ ಪಟ್ಟಣದಲ್ಲಿ ಹೋಳಿ ಹುಣ್ಣಿಮೆ ಬಳಿಕ ಈ ಕಾಮಣ್ಣನ ಗುಗ್ಗಳವನ್ನು ಇಲ್ಲಿನ ಹಿರಿಯರು ಆಚರಿಸಿಕೊಂಡು ಬಂದಂತಹ ಪ್ರತೀತಿಯನ್ನು ಮುಂದುವರೆಸಿ ತ್ರಿಖಾನಿ ನಂದೀಶ್ವರ ದೇವಸ್ಥಾನದಲ್ಲಿ ಗುಗ್ಗಳ ಏರ್ಪಡಿಸಿ ಲೋಕಾದ್ಧಾರಕ್ಕಾಗಿ ಭಗವಂತನಿಗೆ ಸಂಕಲ್ಪ ಅರ್ಪಿಸಿದ್ದಾರೆ.

ಈ ಗುಗ್ಗಳ ಕಾರ್ಯಕ್ರಮದಲ್ಲಿ ಕುಂದಗೋಳ ಪಟ್ಟಣದ ಗುರು ಹಿರಿಯರು ಮಕ್ಕಳು ವೀರಗಾಸೆ ವೇಷದಾರರು, ಮಹಿಳೆಯರು ಮುತ್ತೈದೆಯರು ಪಾಲ್ಗೊಂಡು ಭಕ್ತಿ ಕಾರ್ಯಕ್ರಮವನ್ನು ಇಮ್ಮಡಿಗೊಳಿಸಿದರು.

Edited By :
Kshetra Samachara

Kshetra Samachara

04/04/2022 10:09 am

Cinque Terre

14.61 K

Cinque Terre

2

ಸಂಬಂಧಿತ ಸುದ್ದಿ