ಕುಂದಗೋಳ : ಪಟ್ಟಣದ ಶಿವಾನಂದ ಮಠದ ಸಂಸ್ಥಾಪಕರಾದ ಲಿಂಗೈಕ್ಯ ಪರಮಪೂಜ್ಯ ಬಸವೇಶ್ವರ ಮಹಾಸ್ವಾಮಿಗಳ 37ನೇ ಪುಣ್ಯಾರಾಧನೆ, ಹಾಗೂ ಲಿಂಗೈಕ್ಯ ಪರಮಪೂಜ್ಯ ಬಸವರಾಜ ಮಹಾಸ್ವಾಮಿಗಳ 15ನೇ ಪುಣ್ಯಾರಾಧನೆ ಮತ್ತು ಶಾಂತಯೋಗಿ ಲಿಂಗೈಕ್ಯ ಪರಮಪೂಜ್ಯ ಬಸವೇಶ್ವರ ಮಹಾಸ್ವಾಮಿಗಳ 3ನೇ ಪುಣ್ಯಾರಾಧನೆ ಕಾರ್ಯಕ್ರಮವು ಪಟ್ಟಣದ ಜೆ.ಎಸ್.ಎಸ್. ವಿಧ್ಯಾಪೀಠದ ಆವರಣದಲ್ಲಿ ನೆರವೇರಿತು.
ಮೂವರು ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮದ ಅಂಗವಾಗಿ ಶ್ರೀಗಳ ಗದ್ದುಗೆಗೆ ಪೂಜೆ ಸಮರ್ಪಿಸಿ, ವೇದಿಕೆ ಕಾರ್ಯಕ್ರಮ ಆರಂಭಿಸಲಾಯಿತು, ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಸಚಿವ ಪ್ರೋ.ಐ.ಜಿ.ಸನದಿ, ಮಾಜಿ ಶಾಸಕ ಎಮ್.ಎಸ್.ಅಕ್ಕಿ, ಮುಖಂಡ ಅರವಿಂದಪ್ಪ ಕಟಗಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಜೆ.ಎಸ್.ಎಸ್ ವಿಧ್ಯಾಪೀಠದಲ್ಲಿ ಲಿಂಗೈಕ್ಯ ಶ್ರೀಗಳ ಮಾರ್ಗದರ್ಶನಲ್ಲಿ ಅಭ್ಯಾಸ ಮಾಡಿದ ಹಳೆ ವಿದ್ಯಾರ್ಥಿಗಳು ತಮ್ಮ ತಮ್ಮ ನೆನಪುಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಮಲ್ಲಯ್ಯ ಸ್ವಾಮಿಗಳು, ಶಿವಯೋಗಿಶ್ವರ ಮಹಾಸ್ವಾಮಿಗಳು, ಶಿಥಿಕಂಠೇಶ್ವರ ಮಹಾಸ್ವಾಮಿಗಳು, ಅಭಿನವ ಕಲ್ಯಾಣಪುರ ಬಸವಣ್ಣನವರು, ಹಾಗೂ ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ, ಮುಖಂಡ ಶಿವಾನಂದ ಬೆಂತೂರು ಹಲವು ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.
Kshetra Samachara
04/03/2022 09:38 am