ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶ್ರೀ ಸಿದ್ಧಾರೂಢರ ಮಹಾ ರಥೋತ್ಸವ;ಹರಿದು ಬಂದ ಭಕ್ತರ ಸಾಗರ !

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಸಿದ್ಧಾರೂಢರ ಮಹಾ ರಥೋತ್ಸವವು ಇಂದು ಸಂಜೆ ಶ್ರದ್ಧೆ ಭಕ್ತಿ, ಸಡಗರ, ಸಂಭ್ರಮದಿಂದ ಜರುಗಿತು.

ಕೊರೊನಾ ಎಂಬ ಮಹಾಮಾರಿಗೆ ಎರಡು ವರ್ಷಗಳಿಂದ ಸರಳವಾಗಿ ಆಚರಣೆ ಮಾಡದ ಜಾತ್ರಾ ಮಹೋತ್ಸವನ್ನು, ಇಂದು ಲಕ್ಷಕ್ಕೂ ಅಧಿಕ ಭಕ್ತ ಸಮೂಹ ಈ ಮಹಾರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತಾಭಾವ ಅನುಭವಿಸಿದರು.

ಸಿದ್ಧಾರೂಢರ ಮಹಾರಥೋತ್ಸಕ್ಕೆ ಉತತ್ತಿ, ಬಾಳೆಹಣ್ಣನ್ನು ಭಕ್ತರು ಬೇಡಿದ ವರ ಸಿದ್ದಿಯಾಗಲಿ ಎಂದು ಬೇಡಿಕೊಂಡು ಎಸೆದರು. ಮಹಾರಥೋತ್ಸವದಲ್ಲಿ ಧಾರವಾಡ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ ಸೇರಿ ರಾಜ್ಯದ ವಿವಿಧೆಡೆಯ ಭಕ್ತರು ಮಾತ್ರವಲ್ಲದೆ, ಗೋವಾ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನಿಂದಲೂ ಭಕ್ತಸಾಗರ ಜಾತ್ರೆಗೆ ಹರಿದುಬಂದಿತ್ತು.

Edited By : Manjunath H D
Kshetra Samachara

Kshetra Samachara

02/03/2022 09:03 pm

Cinque Terre

30.61 K

Cinque Terre

31

ಸಂಬಂಧಿತ ಸುದ್ದಿ