ಅಣ್ಣಿಗೇರಿ: ಶ್ರೀ ಗುರು ಅನ್ನದಾನೇಶ್ವರ ದೇವಮಂದಿರ ಮಠದ ಮಹಾನ್ ತಪಸ್ವಿಗಳಾದ ಶ್ರೀ ಮ.ನಿ.ಪ್ರ.ಲಿಂ.ಮೃತ್ಯುಂಜಯ ಅಜ್ಜನ ಸಂಭ್ರಮ ಇದೇ ಮಾರ್ಚ್ 6ರಿಂದ 13ರವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ಪ್ರವಚನ, ಶಿವಾನುಭವ, ಪುರಾಣ ಮಂಗಲೋತ್ಸವ, ಧರ್ಮಚಿಂತನ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಇಂದು ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆದಿಕವಿ ಪಂಪ ಕನ್ನಡ ಬಳಗ ಅಧ್ಯಕ್ಷ ವೀರೇಶ ಕುಬಸದ ಈ ವಿಷಯವನ್ನು ಮಾಧ್ಯಮಗಳ ಮುಖಾಂತರ ತಿಳಿಸಿದರು. ಇದೇ ವೇಳೆ ಮಾತನಾಡಿದ ಪಟ್ಟಣದ ಪುರಸಭೆಯ ಮಾಜಿ ಅಧ್ಯಕ್ಷ ಚಂಬಣ್ಣ ಹಾಳದೋಟರ, ಆಧ್ಯಾತ್ಮಿಕ ಚಿಂತನೆಗಳನ್ನು ಭಕ್ತರಿಗೆ ಮುಟ್ಟಿಸುವ ನಿಟ್ಟಿನಲ್ಲಿ 'ಅಜ್ಜನ ಸಂಭ್ರಮ' ಎಂಬ ಕಾರ್ಯಕ್ರಮವನ್ನು ಮಾಡಲಾಗುವುದು ಎಂದು ತಿಳಿಸಿದರು.
ಪಟ್ಟಣದ ಗಣ್ಯರಾದ ಶಿವಯೋಗಿ ಸುರಕೋಡ ಅವರು ಮಾತನಾಡಿ, ತಾಲೂಕಿನ ಸಕಲ ಸದ್ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಯಾಗಿಸಬೇಕು ಎಂದು ವಿನಂತಿಸಿದರು. ಈ ವೇಳೆ ಗುರು ಪಾಟೀಲ್, ಜಗದೀಶ್ ಕೊಂಡಿಕೊಪ್ಪ, ಮಂಜುನಾಥ್ ಡೊಳ್ಳಿನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Kshetra Samachara
28/02/2022 09:45 pm