ಕುಂದಗೋಳ: ಪ್ರತಿ ವರ್ಷ ವಿಜೃಂಭಣೆಯ ವೈಭವದ ಮೆರುಗನ್ನು ಹೊಂದಿ, ರೈತರು ಯೋಧರ ಏಳ್ಗೆ, ಲೋಕದ ಒಳಿತಿನ ತ್ರಿವಿಧ ದಾಸೋಹಿ ಲಿಂಗೈಕ್ಯ ಕಲ್ಯಾಣಪುರ ಬಸವಣ್ಣಜ್ಜನವರ ಜಾತ್ರಾ ಮಹೋತ್ಸವ ಈ ವರ್ಷ ಅತಿ ಸರಳವಾಗಿ ಜರುಗುತ್ತಲಿದೆ.
ಕೋವಿಡ್ ಮೂರನೇ ಅಲೆ ಮುಂಜಾಗ್ರತೆ ನಿಟ್ಟಿನಲ್ಲಿ ಅಭಿನವ ಕಲ್ಯಾಣಪುರ ಬಸವಣ್ಣನವರು ಜಾತ್ರೆಯನ್ನು ಸಂಕ್ಷಿಪ್ತವಾಗಿ ಆಚರಣೆ ಮಾಡಲು ನಿರ್ಧರಿಸಿದ್ದು, ಅದರಂತೆ ಲಿಂಗೈಕ್ಯ ಕಲ್ಯಾಣಪುರ ಬಸವಣ್ಣಜ್ಜನವರ ಕರ್ತೃ ಗದ್ದುಗೆಗೆ ಇಂದು ಬೆಳಿಗ್ಗೆ ಶಿವಪ್ರಸಾದ ದೇವರು ಹಾಗೂ ಚಂದ್ರಶೇಖರ ದೇವರುಗಳ ನೇತೃತ್ವದಲ್ಲಿ ರುದ್ರಾಭಿಷೇಕ ಬಿಲ್ವಾರ್ಚನೆ ಕಾರ್ಯಕ್ರಮ ಭಕ್ತಾಧಿಗಳ ಸಮ್ಮುಖದಲ್ಲಿ ನೆರವೇರಿದೆ.
ಜಾತ್ರೆ ಹಿನ್ನೆಲೆಯಲ್ಲಿ ಭಕ್ತರು ಮಠಕ್ಕೆ ಆಗಮಿಸಿ ಅಜ್ಜನವರ ದರ್ಶನ ಪಡೆದು, ಹಣ್ಣು, ಕಾಯಿ, ಪ್ರಸಾದದ ನೈವೇದ್ಯ ಸಮರ್ಪಿಸಿ ಶ್ರೀಗಳ ಆರ್ಶಿವಾದಕ್ಕೆ ಪಾತ್ರರಾಗುತ್ತಿದ್ದಾರೆ.
ಸಾಯಂಕಾಲ ನಾಲ್ಕು ಗಂಟೆಗೆ ತ್ರಿವಿಧ ದಾಸೋಹಿ ಲಿಂಗೈಕ್ಯ ಕಲ್ಯಾಣಪುರ ಬಸವಣ್ಣನವರ ರಥೋತ್ಸವವು ಅಕ್ಕನ ಬಳಗದ ಸಹಯೋಗದಲ್ಲಿ ಜರುಗಲಿದ್ದು, ಭಕ್ತಾಧಿಗಳಿಗೆ ಮಠದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
Kshetra Samachara
14/02/2022 09:44 pm