ಹುಬ್ಬಳ್ಳಿ: ಮನೆಯಲ್ಲಿ ಜಗಳ ಮಾಡಿದರೇ ಮಕ್ಕಳು ಮನೆ ಬಿಟ್ಟು ಬರುವುದು ಕಾಮನ್. ಆದರೆ ಊರಿಗೆ ಮಾರ್ಗದರ್ಶಕರಾಗಿದ್ದ ವ್ಯಕ್ತಿ ಮನಸ್ಸಿಗೆ ನೋವಾಗಿರುವ ಹಿನ್ನಲೆಯಲ್ಲಿ ಊರನ್ನೇ ಬಿಟ್ಟು ಬಂದಿದ್ದಾರೆ. ಆ ಮಹಾ ವ್ಯಕ್ತಿಯ ಮನವೊಲಿಸಲು ಊರಿಗೆ ಊರೇ ಅವರ ಬಳಿಗೆ ಬಂದಿದೆ. ಹಾಗಿದ್ದರೇ ಯಾರು ಆ ವ್ಯಕ್ತಿ ಅಲ್ಲಿ ನಡೆದಿದ್ದಾರೂ ಏನು ಅಂತೀರಾ ಈ ಸ್ಟೋರಿ ನೋಡಿ..
ಹೀಗೆ ನೂರಾರು ಸಂಖ್ಯೆಯಲ್ಲಿ ಸೇರಿರುವ ಭಕ್ತಸಾಗರ. ನೀವು ಬರಲೇ ಬೇಕು ಎಂದು ಪಟ್ಟು ಹಿಡಿದ ಹಿರಿಯ ನಾಗರಿಕರು. ಇದಕ್ಕೆಲ್ಲ ಸಾಕ್ಷಿಯಾಗಿರುವುದೇ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಆವರಣ. ಹೌದು.. ಯಾರೋ ಭಕ್ತರು ಮಾಡಿದ ತಪ್ಪಿನಿಂದ ಸ್ವಾಮೀಜಿಯೊಬ್ಬರು ಮನಸ್ಸಿಗೆ ನೋವು ಮಾಡಿಕೊಂಡು ಸುಮಾರು ಆರು ತಿಂಗಳ ಹಿಂದೆಯೇ ಮಠವನ್ನು ಬಿಟ್ಟು ಬಂದಿದ್ದಾರೆ. ಅಣ್ಣಿಗೇರಿಯ ಶ್ರೀ ಶಿವಕುಮಾರ್ ಸ್ವಾಮೀಜಿಯೇ ಭಕ್ತರೊಬ್ಬರು ಮಾಡಿದ ನಿಂದನೆಯಿಂದ ಮಠ ತೊರೆದು ಹುಬ್ಬಳ್ಳಿಗೆ ಬಂದಿದ್ದಾರೆ. ಈಗ ಸ್ವಾಮೀಜಿಯನ್ನು ಮಠಕ್ಕೆ ಕರೆ ತರಲು ಭಕ್ತ ಸಾಗರವೇ ಹರಿದು ಬಂದಿದೆ. ಬೆಳಿಗ್ಗೆಯಿಂದಲೇ ಸ್ವಾಮೀಜಿಯವರ ಮನವೊಲಿಸಲು ಮುಂದಾಗಿದ್ದು, ಸ್ವಾಮೀಜಿಯವರನ್ನು ಕರೆದುಕೊಂಡೇ ಹೋಗುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.
ಇನ್ನೂ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ದಾಸೋಹ ಮಠದ ಶಿವಕುಮಾರ್ ಸ್ವಾಮೀಜಿ 6 ತಿಂಗಳ ಹಿಂದೆಯೇ ಮಠ ತೊರೆದಿದ್ದರು. ಮಠದ ಆಡಳಿತ ಮಂಡಳಿಯ ವ್ಯಕ್ತಿಯಿಂದ ಸ್ವಾಮೀಜಿಗೆ ನಿಂದನೆ ಆರೋಪ ಹಿನ್ನೆಲೆಯಲ್ಲಿ ಮಠವನ್ನು ತೊರೆದಿದ್ದ ಸ್ವಾಮೀಜಿ ಆರು ತಿಂಗಳಿನಿಂದ ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿ ವಾಸ್ತವ್ಯ ಹೂಡಿದ್ದು, ಇಂದು ಭಕ್ತರು ಮಠಕ್ಕೆ ಆಗಮಿಸುವಂತೆ ಸ್ವಾಮೀಜಿಯವರನ್ನು ಮನವೊಲಿಸುತ್ತಿದ್ದಾರೆ. ಆಡಳಿತ ಮಂಡಳಿಯ ಭಕ್ತರೊಬ್ಬರಿಂದ ನೋವು ಆಗಿರುವುದರಿಂದ ಸ್ವಾಮೀಜಿಯವರು ಸಾಕಷ್ಟು ಬೇಸರಗೊಂಡಿದ್ದಾರೆ.
ಒಟ್ಟಿನಲ್ಲಿ ಮಠವನ್ನು ಮಾತ್ರವಲ್ಲದೆ ಊರಿನ ಉದ್ಧಾರಕ್ಕಾಗಿ ಶ್ರಮಿಸಿದ ಸ್ವಾಮೀಜಿ ಕಾರ್ಯಕ್ಕೆ ಊರಿಗೆ ಊರೇ ಮನವೊಲಿಸಲು ಬಂದಿದ್ದಾರೆ. ದಾಸೋಹ ಮಠದಲ್ಲಿ ಜ್ಞಾನ ದಾಸೋಹದ ಮೂಲಕ ಅಣ್ಣಿಗೇರಿ ಪಟ್ಟಣವನ್ನು ಶ್ರೀಮಂತಗೊಳಿಸಿದ ಸ್ವಾಮೀಜಿಯವರ ಆಗಮನಕ್ಕೆ ಊರಿಗೆ ಊರೇ ಎದುರು ನೋಡುತ್ತಿದೆ.
Kshetra Samachara
06/01/2022 05:29 pm