ಕುಂದಗೋಳ : ಎಲ್ಲೇಡೆ ಭಕ್ತಿ ಸಾಕ್ಷಾತ್ಕಾರ, ಧಾರ್ಮಿಕ ಮುಕ್ತಿ ಸಾಧಿಸುವ ಹಂಬಲ, ಪ್ರತಿ ದಿನವೂ ಪೂಜೆ ನೆರವೇರಿಸಿ ಇಂದು ಮಹಾಪೂಜೆ ಕೈಗೊಂಡ ಅಯ್ಯಪ್ಪ ಮಾಲಾಧಾರಿಗಳು ಆ ಪೂಜೆಗೆ ಸಾಕ್ಷಿಯಾಗಿದೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಮಾರುತಿ ದೇವಸ್ಥಾನ.
ಮೈ ನಡುಗುವ ಚಳಿಯಲ್ಲಿ ಇಂದು ಬೆಳಿಗ್ಗೆ ಐದು ಗಂಟೇಗೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಮಹಾಪೂಜೆ ಕಾರ್ಯಕ್ರಮ ಹಮ್ಮಿಕೊಂಡು ಲೋಕದ ಒಳಿತಿಗಾಗಿ ಅಯ್ಯಪ್ಪಸ್ವಾಮಿಗೆ ಹದಿನೇಂಟು ಮೆಟ್ಟಿಲುಗಳ ಪೂಜೆ ಸಲ್ಲಿಸಿದ್ದಾರೆ.
ಇನ್ನೂ ವಿಶೇಷ ಎಂದರೆ, ವಿವಿಧ ಗುರುಸ್ವಾಮಿಗಳ ನೇತೃತ್ವದಲ್ಲಿ ಜರುಗಿದ ಈ ಪೂಜೆಯಲ್ಲಿ ಭಕ್ತಿ ಗಾನಗಳ ಸುಧೆಯನ್ನೇ ಹರಿಸಿದ ಅಯ್ಯಪ್ಪ ಮಾಲಾಧಾರಿಗಳು ಸಂಗೀತ ಸುಧೆ ಕಾರ್ಯಕ್ರಮ ಸಹ ಏರ್ಪಡಿಸಿ ಪೂಜೆ ಜೊತೆ ಹಾಡಿನ ಮೂಲಕ ಅಯ್ಯಪ್ಪನ ಇತಿಹಾಸವನ್ನು ಜನರಿಗೆ ಸಾರಿ ಹೇಳಿ, ಮಹಾಪೂಜೆ ನಿಮಿತ್ತವಾಗಿ ಗುಡೇನಕಟ್ಟಿ ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ಹಳ್ಳಿಗರಿಗೆ ಅನ್ನಸಂತರ್ಪಣೆ ನೆರವೇರಿಸಿದ್ದಾರೆ.
Kshetra Samachara
03/01/2022 11:39 am