ಕುಂದಗೋಳ : ಅಯ್ಯಪ್ಪ ಮಾಲಾಧಾರಿಗಳ ಭಕ್ತಿ ಶ್ರೇಷ್ಠತೆಯೆ ಒಂದು ವಿಶೇಷ ಅತಹ ಅಯ್ಯಪ್ಪ ಮಾಲಾಧಾರಿಗಳು ಕುಂದಗೋಳ ತಾಲೂಕಿನ ಕಡಪಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ನಿನ್ನೆ ಅಯ್ಯಪ್ಪಸ್ವಾಮಿ ಪಡಿಪೂಜೆ ಹಾಗೂ ಎಣ್ಣೇ ಸೇವೆ ನೆರವೇರಿಸಿದ್ದಾರೆ.
ಕಡಪಟ್ಟಿ ಗ್ರಾಮದ ಅಯ್ಯಪ್ಪ ಮಾಲಾಧಾರಿಗಳು ಸಕಲ ಭಕ್ತಾಧಿಗಳ ಸಮ್ಮುಖದಲ್ಲಿ ಪಡಿಪೂಜೆ ಕೈಗೊಂಡು, ಅಯ್ಯಪ್ಪಸ್ವಾಮಿ ಮಂತ್ರ ಪಠಣೆ ಮಾಡಿ ಎಣ್ಣೆ ಸೇವೆ ಸಲ್ಲಿಸಿ ತಮ್ಮ ಭಕ್ತಿ ಸಮರ್ಪಿಸಿದ್ದಾರೆ. ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಅಯ್ಯಪ್ಪಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಭಾಗವಹಿಸಿ ಅನ್ನಸಂತರ್ಪಣೆ ಸವಿದು ಪುನೀತರಾಗಿದ್ದಾರೆ.
Kshetra Samachara
30/12/2021 01:00 pm