ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಸರಳ ಸಂಪನ್ನ ಮಿಶ್ರಿಕೋಟಿ ವೀರಭದ್ರೇಶ್ವರ ದೇವರ ರಥೋತ್ಸವ

ಕಲಘಟಗಿ : ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದ ವೀರಭದ್ರೇಶ್ವರ ದೇವರ ಜಾತ್ರಾ ರಥೋತ್ಸವ ಇಂದು ಸರಳ ಮತ್ತು ಸಂಪನ್ನವಾಗಿ ನಡೆಯಿತು.

ಹೌದು ! ಕಲಘಟಗಿ ಹನ್ನೆರಡು ಮಠ ಶ್ರೀ.ಷ.ಬ್ರ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಇವರ ನೇತೃತ್ವದಲ್ಲಿ ಹೊಸದಾಗಿ ದೀಪಮಾಲಿ ಕಂಬ ಸ್ಥಾಪನೆ, ಕಳಸಾರೋಹಣ ಬೆಳಗ್ಗೆ ದೇವರಿಗೆ ಅಭಿಷೇಕ, ಅಗ್ನಿಕುಂಡ, ಪಲ್ಲಕ್ಕಿ, ಕುಂಭ ಮೆರವಣಿಗೆಯನ್ನು ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತ ಅನೇಕ ಪವಾಡಗಳನ್ನು ತೋರಿಸುತ್ತ ಪುರವಂತರು ಸಾಗಿದರು.

ಈ ವೇಳೆ ಮಹಿಳೆಯರು ಹಾಗೂ ಮಕ್ಕಳು ಅಗ್ನಿಕೊಂಡ ಹಾಯ್ದರು. ಅಲ್ಲದೆ ಪುರವಂತರ ನೇತೃತ್ವದಲ್ಲಿ ಮೂಲಕ ಹಿತ್ತಾಳೆ, ಕಬ್ಬಿಣದ ಸಲಾಕೆ ಹಾಗೂ ದಾರದ ಮೂಲಕ ಶಸ್ತ್ರ ಹಾಕಿಸಿಕೊಂಡರು. ಭಕ್ತಾಧಿಗಳು ವಿವಿಧ ರೀತಿಯಲ್ಲಿ ಹರಕೆ ತೀರಿಸುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು.

ಸಕಲ ವಾದ್ಯ ಮೇಳದೊಂದಿಗೆ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಗ್ರಾಮದ ಸದ್ಭಕ್ತರ ಸಮ್ಮುಖದಲ್ಲಿ ಪ್ಯಾಟಿ ಓಣಿಯ ವೀರಭದ್ರೇಶ್ವರ ದೇವಸ್ಥಾನದಿಂದ ಪ್ಯಾಟಿ

ದೇವಸ್ಥಾನದವರೆಗೆ ಸಾಯಂಕಾಲ ರಥೋತ್ಸವ ಜರುಗಿತು.

Edited By : Nagesh Gaonkar
Kshetra Samachara

Kshetra Samachara

19/12/2021 09:35 pm

Cinque Terre

71.31 K

Cinque Terre

0

ಸಂಬಂಧಿತ ಸುದ್ದಿ