ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಮತಾಂತರ ಕಾಯ್ದೆ ಜಾರಿಮಾಡಲು ಮುಖಂಡರೊಡನೆ ಚರ್ಚಿಸಿ! ಹ್ಯಾರಿ ಡಿಸೋಜ್

ಹುಬ್ಬಳ್ಳಿ : ಸರ್ಕಾರ ಮತಾಂತರ ಕಾಯ್ದೆ ಜಾರಿಗೋಳಿಸುವ ಮೊದಲು, ಕ್ರೈಸ್ತ ಮುಖಂಡರೊಡನೆ ಹಾಗೂ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದವರೊಡನೆ ಚರ್ಚಿಸಿ ಕಾಯ್ದೆ ಜಾರಗೋಳಿಸಿ ಎಂದು ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಅಸೋಸಿಯೇಷನ್ ಅಧ್ಯಕ್ಷರಾದ ಹ್ಯಾರಿ ಡಿಸೋಜ ಹೇಳಿದರು.

ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಲು, ಯಾವುದೇ ರೀತಿಯ ಗಂಭೀರ ಘಟನೆಗಳು ಅಥವಾ ಪ್ರಮೇಯಗಳು ಉದ್ಭವವಾಗಿಲ್ಲ, ಈ ಬಗ್ಗೆ ಸರ್ಕಾರದಲ್ಲಿ ದಾಖಲೆ ಮತ್ತು ಅಂಕಿ ಅಂಶಗಳು ಇಲ್ಲದೇ ಇರುವುದರಿಂದ ಕ್ರೈಸ್ತ ಸಮುದಾಯಕ್ಕೆ ಸಂಬಂಧಪಟ್ಟಂತೆ ಸರ್ಕಾರ ಯಾವುದೇ ಕಾನೂನನ್ನು ಜಾರಿ ಮಾಡಬೇಕಾದರೆ ಸರ್ಕಾರ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಹಶೀಲ್ದಾರ ಇವರ ವರದಿ ಪಡೆದು ಅಥವಾ ತಾಂತ್ರಿಕ ಸಮಿತಿಯನ್ನು ರಚಿಸಿ ವರದಿ ಬಂದ ನಂತರ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು.

Edited By : Shivu K
Kshetra Samachara

Kshetra Samachara

17/12/2021 12:51 pm

Cinque Terre

37.3 K

Cinque Terre

10

ಸಂಬಂಧಿತ ಸುದ್ದಿ