ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸರಳ ಶಾಸ್ತ್ರೋಕ್ತವಾಯ್ತು ಮೈಲಾರಲಿಂಗೇಶ್ವರ ಜಾತ್ರೆ

ಕುಂದಗೋಳ : ಈ ಹಳ್ಳಿಗಳು ಅಲ್ಲಿನ ಭಕ್ತಿ ಜಾತ್ರಾ ಕಾರ್ಯಕ್ರಮಗಳು ಭಕ್ತಿ ಪವಾಡಗಳು ನೋಡುಗರ ಮೈ ರೋಮಾಂಚನ ಗೊಳಿಸದೇ ಇರಲಾಲೂ ಅಂತಹ ಜಾತ್ರಾ ಉತ್ಸವಕ್ಕೆ ಇಲ್ಲೋಂದು ಗ್ರಾಮ ಸಾಕ್ಷಿಯಾಗಿದೆ.

ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ಜಾತ್ರೆ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಅತಿ ಸರಳವಾಗಿ ಜರುಗಿದ್ದು, ಆ ಜಾತ್ರಾ ಉತ್ಸವದಲ್ಲಿ ನಡೆದ ಶಸ್ತ್ರ ಪವಾಡ, ಹಗ್ಗ ಹರಿಯುವ ಪವಾಡ, ಸರಪಳಿ ಪವಾಡಗಳು ಜಾತ್ರೆಗೆ ಸೇರಿದ ಸಭಿಕರ ಮೈ ರೋಮಾಂಚನ ಮಾಡಿವೆ.

ಇನ್ನೂ ಗೋರವಯ್ಯ ವೇಷಧಾರಿಗಳು ಏಳು ಕೋಟಿ ಏಳು ಕೋಟಿ ಜಪ ಮಾಡುತ್ತಾ ಬೆಳಕು ಹೊಂದಿಸುವ ಕಾರ್ಯಕ್ರಮ ಮೈಲಾರಲಿಂಗೇಶ್ವರನ ಭಕ್ತಿ ಪ್ರತಿಷ್ಠೆಗೆ ಸಾಕ್ಷಿಯಾಯ್ತು, ಒಟ್ಟಾರೆ ಅತಿ ಸರಳ ಮತ್ತು ಶಾಸ್ತ್ರೋಕ್ತವಾಗಿ ಮೈಲಾರಲಿಂಗೇಶ್ವರ ಜಾತ್ರೆ ನೆರವೇರಿತು.

Edited By : Shivu K
Kshetra Samachara

Kshetra Samachara

13/12/2021 03:43 pm

Cinque Terre

32.1 K

Cinque Terre

0

ಸಂಬಂಧಿತ ಸುದ್ದಿ