ನರಗುಂದ: ಭಕ್ತಿ ಎಂಬುದು ಸ್ವಾರ್ಥಕ್ಕಾಗಿ ಅಲ್ಲ. ಬದಲಾಗಿ ಅಂತರಂಗ ಶುದ್ಧಿಗಾಗಿ. ಪೂಜೆ ಎಂಬುದು ದೇವರ ಸೇವೆ ಅಲ್ಲ. ಅದು ಲೋಕಕಲ್ಯಾಣಕ್ಕಾಗಿ. ನೂರಾರು ವರ್ಷಗಳಿಂದ ನರಗುಂದ ಪಟ್ಟಣದ ಸುಕ್ಷೇತ್ರ ವಿರಕ್ತ ಮಠ ಸಮಾಜಮುಖಿ ಸತ್ಕಾರ್ಯಗಳನ್ನು ಮಾಡುತ್ತ ಭಕ್ತರಿಗೆ ಸನ್ಮಾರ್ಗದ ಹಾದಿ ತೋರುತ್ತಿದೆ.
ಕಳೆದ 11ದಿನಗಳಿಂದ ನರಗುಂದದ ವಿರಕ್ತ ಮಠದಲ್ಲಿ ಹನ್ನೊಂದು ಲಕ್ಷದ ಹನ್ನೊಂದು ಸಾವಿರದ ಹನ್ನೊಂದು ಶಿವಲಿಂಗಗಳ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪರಮಪೂಜ್ಯ ಕರ್ತೃಶ್ರೀ ಚನ್ನಬಸವ ಶಿವಯೋಗಿಗಳ ಕೃಪಾಶೀರ್ವಾದದಿಂದ ಹಮ್ಮಿಕೊಳ್ಳಲಾಗಿದ್ದ ಪೂಜಾ ವಿಧಿವಿಧಾನದಲ್ಲಿ ಸಾವಿರಾರು ಸಧ್ಭಕ್ತರು ಪಾಲ್ಗೊಂಡಿದ್ದರು.
ಮೂರು ತಲೆಮಾರಿನ ಐತಿಹ್ಯ ಇರುವ ಶ್ರೀ ಮಠವು ಉತ್ತರ ಕರ್ನಾಟಕ ಹಲವು ಜಿಲ್ಲೆಗಳಲ್ಲೂ ಭಕ್ತರನ್ನು ಹೊಂದಿದೆ. ಆಧ್ಯಾತ್ಮ ಸಾಧ್ವಿ ಚನ್ನಬಸವ ಶಿವಯೋಗಿಗಳು ನಡೆದಾಡಿದ ಈ ಪುಣ್ಯಭೂಮಿ ಸದ್ಯ ಭಕ್ತರ ಪಾಲಿಗೆ ಪವಿತ್ರ ನೆಲವಾಗಿದೆ..ಹೀಗಾಗಿ ಭಕ್ತರು ಸ್ವಯಂಪ್ರೇರಿತರಾಗಿ ಶಿವಲಿಂಗಳ ಮಹಾಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಹಾಮಾರಿ ಕೊರೊನಾ ಹಾಗೂ ಇನ್ನಿತರ ಮಾರಕ ವ್ಯಾಧಿಗಳು ಇಡೀ ಜಗತ್ತಿನ ಮನುಕುಲದ ಜೀವಹಿಂಡಿದೆ. ಲೋಕದ ಸಕಲ ಹುಲುಮಾನವರ ಸಂಕಷ್ಟಗಳೆಲ್ಲ ನಿವಾರಣೆಯಾಗಲಿ ಎಂದ ಸದಾಶಯದೊಂದಿಗೆ ಮಹಾಪೂಜೆ ಸಂಪನ್ನಗೊಂಡಿದೆ.
Kshetra Samachara
09/12/2021 08:32 pm