ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಜ್ಞಾನದಿಂದ ಶಕ್ತಿ ನಡತೆಯಿಂದ ಗೌರವ ಪ್ರಾಪ್ತಿ : ರಂಭಾಪುರಿ ಶ್ರೀ

ಕಲಘಟಗಿ : ಜೀವನದಲ್ಲಿ ಯಶಸ್ಸಿಗಿಂತಲೂ ಸಂತೃಪ್ತಿ ಮುಖ್ಯ. ಉನ್ನತಿಯಲ್ಲಿ ಶ್ರಮದ ಪಾಲು ದೊಡ್ಡದು. ಶ್ರಮ ಶ್ರದ್ಧೆಯಿದ್ದರೆ ಅದೃಷ್ಟ ತಾನಾಗಿಯೇ ಬಂದು ಸೇರುತ್ತದೆ. ಜ್ಞಾನದಿಂದ ಶಕ್ತಿ ನಡತೆಯಿಂದ ಗೌರವ ದೊರಕುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ನಗರದ ಶ್ರೀ ಹನ್ನೆರಡು ಮಠದಲ್ಲಿ ಜರುಗಿದ ಲಿಂ. ಮಡಿವಾಳ ಶ್ರೀಗಳವರ 31ನೇ ಪುಣ್ಯ ಸ್ಮರಣೋತ್ಸವ ಹಾಗೂ ರೇವಣಸಿದ್ಧ ಶ್ರೀಗಳವರ ಪಟ್ಟಾಧಿಕಾರದ ಸುವರ್ಣ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ “ಜಂಗಮ ಯೋಗಿ ರೇವಣಸಿದ್ಧ” ನಾಮಾಂಕಿತವುಳ್ಳ ಸ್ಮರಣ ಸಂಪುಟವನ್ನು ಮಾಜಿ ಮುಖ್ಯ ಮಂತ್ರಿ-ಶಾಸಕ ಜಗದೀಶ ಶೆಟ್ಟರ್ ಬಿಡುಗಡೆಗೊಳಿಸಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದೀಪ ಬೆಳಗುವ ಮೂಲಕ ಸಮಾರಂಭವ ಉದ್ಘಾಟಿಸಿದರು. ಸಚಿವ ಹಾಗೂ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಇತರರು ಉಪಸ್ಥಿತರಿದ್ದರು.

ಶಿರಕೋಳ ಗುರುಸಿದ್ಧೇಶ್ವರ ಶ್ರೀಗಳು, ಸುಳ್ಳದ ಶಿವಸಿದ್ಧರಾಮೇಶ್ವರ ಶ್ರೀಗಳು, ಬ್ಯಾಹಟ್ಟಿ ಮರುಳಸಿದ್ಧ ಶ್ರೀಗಳು, ಮಣಕಟ್ಟಿ ವಿಶ್ವಾರಾಧ್ಯ ಶ್ರೀಗಳು, ಹುಬ್ಬಳ್ಳಿ ರಾಜಶೇಖರ ಶ್ರೀಗಳು, ಹಣ್ಣಿಕೇರಿ ರೇವಣಸಿದ್ಧ ಶ್ರೀಗಳು, ಬೆಲವಂತರ ರೇವಣಸಿದ್ಧ ಶ್ರೀಗಳು, ಹನ್ನೆರಡು ಮಠದ ಉತ್ತರಾಧಿಕಾರಿ ನಾಗರಾಜ ದೇವರು, ಅಂತೂರ-ಬೆಂತೂರ ಕುಮಾರದೇವರು ಹಿರೇಮಠ ಪಾಲ್ಗೊಂಡು ನುಡಿ ಸೇವೆ ಸಲ್ಲಿಸಿದರು.

Edited By :
Kshetra Samachara

Kshetra Samachara

06/12/2021 05:51 pm

Cinque Terre

7.92 K

Cinque Terre

0

ಸಂಬಂಧಿತ ಸುದ್ದಿ