ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಭಾನುವಾರ ಕಾರ್ತಿಕ ಮಾಸವನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.
ಕಾರ್ತಿಕ ಮಾಸದ ಕೊನೆಯ ದಿನವಾದ ಪಾಡ್ಯಮಿಯಂದು ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ತುಪ್ಪದ ದೀಪವನ್ನು ಬೆಳಗಿ ಪ್ರಸಕ್ತ ವರ್ಷದ ಕಾರ್ತಿಕ ಮಾಸಕ್ಕೆ ಸಂಭ್ರಮದ ವಿದಾಯ ಹೇಳಲಾಯಿತು.
ಗ್ರಾಮದ ಹೆಣ್ಣುಮಕ್ಕಳೆಲ್ಲ ದೇವಸ್ಥಾನಕ್ಕೆ ಹಣತೆ ತಂದಿದ್ದರು. ದೇವಸ್ಥಾನದ ಕಮಿಟಿ ಸದಸ್ಯರು ಆ ದೀಪಗಳಿಗೆ ತುಪ್ಪವನ್ನು ನೀಡಿ ಜ್ಯೋತಿ ಬೆಳಗಿದರು. ಒಟ್ಟಾರೆಯಾಗಿ ಕಾರ್ತಿಕ ಮಾಸದ ಕೊನೆಯ ದಿನವಾದ ಭಾನುವಾರ ಹೆಂಗಳೆಯರೆಲ್ಲ ಹಣತೆ ಬೆಳಗಿಸಿ ಸಂಭ್ರಮಿಸಿದರು.
Kshetra Samachara
05/12/2021 09:06 pm