ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ರಾಚೋಟೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ ಭಕ್ತ ಸಂಕುಲದ ದರ್ಶನ

ಕುಂದಗೋಳ : ತಾಲೂಕಿನ ಕಮಡೊಳ್ಳಿ ಗ್ರಾಮದ ಲೋಚನೇಶ್ವರ ವಿರಕ್ತಮಠದ ಶ್ರೀ ಮಹಾತಪಸ್ವಿ ರಾಚೋಟೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಇಂದು ಕಮಡೊಳ್ಳಿ ಗ್ರಾಮದಲ್ಲಿ ನೆರವೇರಿತು.

ಹೌದು ! ಲೋಚನೇಶ್ವರ ಮಠದ ಐದನೇ ಪೀಠಾಧಿಪತಿ ರಾಚೋಟೇಶ್ವರ ಶ್ರೀಗಳು ಕಳೆದ ನವೆಂಬರ್ 18 ರಂದು ವಯೋ ಸಹಜ ಕಾಯಿಲೆಯಿಂದ ತಮ್ಮ 103ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದರು, ಇಂದು ಅವರ ಪುಣ್ಯಾರಾಧನೆ ಕಾರ್ಯಕ್ರಮದ ಅಂಗವಾಗಿ ಶ್ರೀಗಳ ಕರ್ತೃ ಗದ್ದುಗೆ ಆಸನ ಹಾಗೂ ಶ್ರೀಗಳು ಧರಿಸುತ್ತಿದ್ದ ಪಾದರಕ್ಷೆಗಳಿಗೆ ಪೂಜೆ ನೆರವೇರಿಸಿ ಹೂಗಳಿಂದ ಅಲಂಕಾರ ಮಾಡಲಾಗಿತ್ತು.

ಇಡೀ ಕುಂದಗೋಳ ತಾಲೂಕು ಸೇರಿದಂತೆ ಹೊರಗಡೆಯಿಂದ ಭಕ್ತ ಸಾಗರ ಆಗಮಿಸಿ ಶ್ರೀಗಳು ಲಿಂಗೈಕ್ಯ ಕರ್ತೃ ಗದ್ದುಗೆಗೆ ದರ್ಶನ ಪಡೆದು, ಹೂ ಮಾಲೆ ಹಣ್ಣು ಸಮರ್ಪಿಸಿ ಭಸ್ಮ ಧರಿಸಿ ಪ್ರಸಾಧ ಸ್ವೀಕರಿಸಿದರು.

ಇನ್ನೂ ಶ್ರೀಗಳು ಪುಣ್ಯಾರಾಧನೆ ಕಾರ್ಯಕ್ರಮದ ಸಭೆಯಲ್ಲಿ ಹಲವಾರು ಸ್ವಾಮಿಗಳು ವೇದಿಕೆಯಲ್ಲಿ ಭಾಗವಹಿಸಿ ಶ್ರೀಗಳ ದರ್ಶನ ಪಡೆದು ರಾಚೋಟೇಶ್ವರ ಮಹಾಸ್ವಾಮಿಗಳ ಸಾಮಾಜಿಕ ಧಾರ್ಮಿಕ ಕಾರ್ಯ ಅವರ ಸಾಧನೆ ಭಕ್ತ ಸಂಕುಲಕ್ಕೆ ಶ್ರೀಗಳು ಮಾಡಿದ ಪುಣ್ಯದ ಕಾಯಕಗಳನ್ನು ನೆರೆದ ಸಭಿಕರಿಗೆ ತಿಳಿಸಿದರು. ಪುಣ್ಯಾರಾಧನೆ ಕಾರ್ಯಕ್ರಮಕಕ್ಕೆ ವಿವಿಧ ಜನಪ್ರತಿನಿಧಿಗಳು ಸಂಘ ಸಂಸ್ಥೆಗಳ ಮುಖಂಡರು ಸಹ ಭಾಗವಹಿಸಿ ಶ್ರೀಗಳ ದರ್ಶನ ಪಡೆದು ಪುನೀತರಾಗಿದರು.

Edited By : Nagesh Gaonkar
Kshetra Samachara

Kshetra Samachara

27/11/2021 04:59 pm

Cinque Terre

17.31 K

Cinque Terre

0

ಸಂಬಂಧಿತ ಸುದ್ದಿ