ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ತುಳಸಿ ಕಲ್ಯಾಣ ಅಹೋರಾತ್ರಿ ಭಜನಾ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಗ್ರಾಮ

ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದ ರೈತ ಮಾನಪ್ಪ ಬಡಿಗೇರ ಎಂಬುವವರ ಮನೆಯಲ್ಲಿ ತುಳಸಿ ವಿವಾಹ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಸಹ ತಾಲೂಕಿನ ಮಂಟೂರು ಗ್ರಾಮದ ರಾಮಲಿಂಗೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಪೂಜೆ ನಡೆಯಿತು.

ಹೌದು ! ತುಳಸಿ ವಿವಾಹವನ್ನು ಕುಂದಗೋಳ ತಾಲೂಕಿನಲ್ಲೇ ಅತಿ ವಿಶೇಷವಾಗಿ ಆಚರಿಸುವ ಮಾನಪ್ಪ ಬಡಿಗೇರ ಇಂದು ತುಳಸಿ ವಿವಾಹದ ನಿಮಿತ್ತ ಸಕಲ ದೇವರಿಗೆ ಪೂಜೆ ಸಲ್ಲಿಸಿ, ಗ್ರಾಮದ ಐದು ಭಜನಾ ಸಂಘದವರಿಂದ ಅಹೋರಾತ್ರಿ ಭಜನಾ ಕಾರ್ಯಕ್ರಮ ಏರ್ಪಡಿಸಿದ್ದಾರೆ.

ಈಗಾಗಲೇ ರಾಮಲಿಂಗೇಶ್ವರ ಶ್ರೀಗಳ ನೇತೃತ್ವದಲ್ಲಿ ಪೂಜೆ ಸಲ್ಲಿಸಿದ ರಾಮಪ್ಪ ಬಡಿಗೇರ ಇಡೀ ಗುಡೇನಕಟ್ಟಿ ಗ್ರಾಮದ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಿ ತಳಿರು ತೋರಣದ ಚಪ್ಪರ ನಡುವೆ ಭಜನಾ ಕಾರ್ಯಕ್ರಮ ಸಹ ಏರ್ಪಡಿಸಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

16/11/2021 07:11 pm

Cinque Terre

18.2 K

Cinque Terre

0

ಸಂಬಂಧಿತ ಸುದ್ದಿ