ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ: ವಾಣಿಜ್ಯನಗರಿಯ ಪ್ರತಿಷ್ಠಿತವಾದ ಕಮರಿಪೇಟೆಯಲ್ಲಿ ಪ್ರತಿವರ್ಷವೂ ದಸರಾ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ತಮಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ಮನರಂಜನೆ ನೀಡುವ ಮೂಲಕ ವಿಜಯದಶಮಿ ಆಚರಣೆ ಮಾಡಲಾಗುತ್ತಿದ್ದು, ನೋಡುಗರ ಒಂದು ಕ್ಷಣ ಅಚ್ಚರಿಗೊಳ್ಳುವಂತೆ ಮಾಡಿದೆ. ಹಾಗಿದ್ದರೇ ನೋಡಿ ನಮ್ಮ ಹುಬ್ಬಳ್ಳಿಯ ವಿನೂತನ ಆಚರಣೆ.
ಇಲ್ಲಿ ಒಂದನ್ನು ಒಂದು ಹಿಂದಿಕ್ಕಿಸುವಂತೆ ಆಕ್ರಮಣಕಾರಿಯಾಗಿ ಬರುತ್ತಿರುವ ಟಗರು, ಎದುರಾಳಿಯನ್ನು ಹೈರಾಣಾಗಿಸಲು ಮತ್ತೊಂದು ರೀತಿಯ ಪರಾಕ್ರಮ, ನೋಡುಗರಲ್ಲಿ ಕುತೂಹಲ ಕೆರಳಿಸಿ ಕೇಕೆ ಸಿಳ್ಳೇ ಹೊಡೆಯುವಂತೆ ವಾತಾವರಣ ನಿರ್ಮಾಣ ಮಾಡಿರುವುದು ಹುಬ್ಬಳ್ಳಿಯ ಕಮರಿಪೇಟೆಯ ಟಗರಿನ ಕಾಳಗ. ಹೌದು..ರೋಷದಿಂದ ನುಗ್ಗಿ ಬರುವ ಟಗರು. ಮತ್ತೊಂದು ತಡೆದು ತಲೆಗೆ ತಲೆ ಕೊಟ್ಟು ಹೋರಾಡುವ ಮತ್ತೊಂದು ಟಗರು ಇಂತಹ ವಿಶಿಷ್ಠವಾದ ಸಂದರ್ಭಕ್ಕೆ ಸಾಕ್ಷಿಯಾಗಿತು ಟಗರಿನ ಕಾಳಗ...
ಉತ್ತರ ಕರ್ನಾಟಕದ ಹೃದಯ ಭಾಗದಲ್ಲಿರುವ ಹುಬ್ಬಳ್ಳಿಯ ಕಮರಿಪೇಟೆಯಲ್ಲಿ ದಸರಾ ಹಬ್ಬವನ್ನು ಟಗರಿನ ಕಾಳಗದ ಮೂಲಕ ಆಚರಣೆ ಮಾಡಲಾಗುತ್ತದೆ. ಸುಮಾರು ವರ್ಷಗಳಿಂದ ಟಗರಿನ ಕಾಳಗದ ಮೂಲಕ ಆಚರಣೆ ಮಾಡಲಾಗುತ್ತಿದ್ದು, ಈ ಕಾಳಗಕ್ಕೆ ಐತಿಹಾಸಿಕ ಪರಂಪರೆ ಹೊಂದಿದೆ. ಮನುಷ್ಯರಿಗೆ ಮಾತ್ರ ಮನರಂಜನೆಯಲ್ಲ ಪ್ರಾಣಿಗಳಿಗೂ ಕೂಡ ಒಂದು ಸ್ಪರ್ಧೆಯ ಮೂಲಕ ಮನರಂಜನೆ ನೀಡಬೇಕು ಎಂಬುವಂತ ಸದುದ್ದೇಶದಿಂದ ಕಮರಿಪೇಟೆಯಲ್ಲಿ ಪ್ರತಿವರ್ಷವೂ ಟಗರಿನ ಕಾಳಗ ಆಯೋಜನೆ ಮಾಡಲಾಗುತ್ತದೆ. ಪ್ರತಿವರ್ಷ ಕೂಡ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಆದರೇ ಈ ಬಾರಿ ಮಹಾಮಾರಿ ಕಿಲ್ಲರ್ ಕೊರೋನಾದ ಆತಂಕದಿಂದ ಸಂಕ್ಷಿಪ್ತವಾಗಿ ಆಚರಣೆ ಮಾಡಲಾಗಿದೆ. ಅಲ್ಲದೇ ಸಂಪ್ರದಾಯದ ಆಚರಣೆ ಕೈ ಬಿಡಬಾರದು ಎಂಬುವ ಹಿನ್ನೆಲೆಯಲ್ಲಿ ಆಚರಣೆ ಮಾಡಲಾಗಿದೆ. ಇನ್ನೂ ಈ ಟಗರಿನ ಕಾಳಗ ಸ್ನೇಹ, ಪ್ರೀತಿ ಸಹಬಾಳ್ವೆಗೆ ಸಾಕ್ಷಿಯಾಗಿದೆ ಎನ್ನುತ್ತಾರೆ ಇಲ್ಲಿನ ಜನರು.
ಒಟ್ಟಿನಲ್ಲಿ ಟಗರಿನ ಕಾಳಗ ಎಸ್.ಎಸ್.ಕೆ ಸಮಾಜದ ಒಂದು ಸಂಪ್ರದಾಯಿಕ ಆಚರಣೆ ಆಗಿದ್ದು, ಮಕ್ಕಳು,ಹಿರಿಯರು ಹಾಗೂ ಯುವ ಸಮುದಾಯ ಸಾಕಷ್ಟು ಸಂತೋಷದಿಂದ ಕಾಳಗದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.
Kshetra Samachara
13/10/2021 08:21 pm