ಧಾರವಾಡ: ಧಾರವಾಡದ ಮರಾಠಾ ಕಾಲೊನಿ ರಸ್ತೆಯ ಕಿಲ್ಲಾದಲ್ಲಿರುವ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಪ್ರತಿನಿತ್ಯ ವಿಶೇಷ ಪೂಜೆಗಳು ನಡೆಯತ್ತಿವೆ.
ಇಂದು ದುರ್ಗಾದೇವಿಯನ್ನು ತರಕಾರಿಯಿಂದ ಅಲಂಕರಿಸಲಾಗಿತ್ತು. ಹೀಗೆ ತರಕಾರಿಗಳಿಂದ ಅಲಂಕಾರಗೊಂಡಿದ್ದ ದುರ್ಗಾದೇವಿ, ಎಲ್ಲರ ಕಣ್ಮನಸೆಳೆದಳು. ಒಂಬತ್ತು ದಿನಗಳ ಕಾಲ ದುರ್ಗಾದೇವಿಗೆ ವಿಭಿನ್ನ ಬಗೆಯಲ್ಲಿ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ.
Kshetra Samachara
12/10/2021 12:46 pm