ಅಣ್ಣಿಗೇರಿ: ಪ್ರತಿಯೊಬ್ಬರು ಲಿಂಗ ಪೂಜೆ ಪಾಲಿಸುವ ಮೂಲಕ ಧರ್ಮ ಬೆಳೆಸಬೇಕು ಎಂದು ಅಡ್ನೂರು- ರಾಜೂರು- ಗದಗ ಪಟ್ಟದ ದೇವರು ಮ.ಘಚ.ಅಭಿನವ ಶ್ರೀ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಕರೆ ನೀಡಿದರು.
ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದ ದೇಸಾಯಿಪೇಟೆ ಓಣಿಯ ಶ್ರೀ ಶಾಂಭವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ನಿಮಿತ್ತ ನಡೆಯುತ್ತಿರುವ ಕಾರ್ಯಮದಲ್ಲಿ ಇಂದು ಅಡ್ನೂಡು ಶ್ರೀಗಳು 25 ಮಕ್ಕಳಿಗೆ ಅಯ್ಯಾಚಾರ, 25 ಮಹಿಳೆಯರಿಗೆ ಲಿಂಗ ಧೀಕ್ಷೆ ನೀಡಿ ಆಶೀರ್ವಚನ ನೀಡಿದರು.
ನಿತ್ಯ ಜೀವನದಲ್ಲಿ ಲಿಂಗ ಪೂಜೆ ಅಳವಡಿಸಿಕೊಂಡರೆ ಏಕಾಗ್ರತೆ, ತಾಳ್ಮೆ ಹೆಚ್ಚುವುದು ಹಾಗೂ ಬದುಕು ಹಸನಾಗುವುದು. ಲಿಂಗಾಯತ ಧರ್ಮದ ಬೆಳೆಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಶ್ರೀಗಳು ಸಲಹೆ ನೀಡಿದರು.
Kshetra Samachara
08/10/2021 06:40 pm