ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೊಟಬಾಗಿಯಲ್ಲಿ ಪುರಾತನ ಕಾಲದ ಚೋವಿಸ್ ತೀರ್ಥಂಕರರ ಮೂರ್ತಿ ಪತ್ತೆ

ಧಾರವಾಡ: ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಪುರಾತನ ಕಾಲದ ಚೋವಿಸ್ ತೀರ್ಥಂಕರರ ಮೂರ್ತಿ ಪತ್ತೆಯಾಗಿದೆ.

ಮುನಿ ನಿವಾಸ ನಿರ್ಮಾಣಕ್ಕಾಗಿ ಗ್ರಾಮದ ಹಳೆಯ ಬಸದಿ ಇರುವ ಜಾಗವನ್ನು ಅಗೆಯುವ ಸಂದರ್ಭದಲ್ಲಿ ಸುಮಾರು 10 ಅಡಿ ಆಳದಲ್ಲಿ ಈ ಪುರಾತನ ಮೂರ್ತಿ ದೊರೆತಿದೆ. ಇದು 8ನೇ ಶತಮಾನಕ್ಕಿಂತ ಹಳೆಯದಾಗಿರಬಹುದೆಂದು ಊಹಿಸಲಾಗಿದೆ.

ಇದೇ ಜಾಗದಲ್ಲಿ ಕೆಲವು ವರ್ಷಗಳ ಹಿಂದೆ ಭಗವಾನ್ ಆದಿನಾಥರ ಹಾಗೂ ಭಗವಾನ್ ವಿಮಲನಾಥ ತೀರ್ಥಂಕರರ ಮೂರ್ತಿಗಳು ಹಾಗೂ ಹಳಗನ್ನಡದ ಶಾಸನಗಳು ದೊರೆತಿದ್ದವು.

Edited By : Shivu K
Kshetra Samachara

Kshetra Samachara

02/10/2021 01:26 pm

Cinque Terre

40.11 K

Cinque Terre

1

ಸಂಬಂಧಿತ ಸುದ್ದಿ