ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಖಿಲ ಭಾರತ ಅಯ್ಯಪ್ಪ ಸೇವಾ ಸೈನ್ಯದ ರಾಷ್ಟ್ರೀಯ ಅಧ್ಯಕ್ಷರಾಗಿ ಡಾ.ಕೆ.ಎಂ.ಮೋಹನ ಗುರುಸ್ವಾಮಿ ಆಯ್ಕೆ...!

ಹುಬ್ಬಳ್ಳಿ: ಆಧ್ಯಾತ್ಮಿಕ ಹಾಗೂ ಧಾರ್ಮಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಕಷ್ಟು ಜನರಿಗೆ ಅಯ್ಯಪ್ಪ ಸ್ವಾಮಿಯವರ ಸನ್ಮಾರ್ಗವನ್ನು ಕಲ್ಪಿಸಿದ ವಾಣಿಜ್ಯನಗರಿ ಹುಬ್ಬಳ್ಳಿಯ ಡಾ. ಕೆ.ಎಂ. ಮೋಹನ್ ಗುರುಸ್ವಾಮಿಯವರು ಅಖಿಲ ಭಾರತ ಅಯ್ಯಪ್ಪ ಸ್ವಾಮಿ ಸೇವಾ ಸೈನ್ಯದ‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ಮೊದಲು ಅಖಿಲ ಕರ್ನಾಟಕ ಅಯ್ಯಪ್ಪ ಸ್ವಾಮಿ ಸೇವಾ ಸೈನ್ಯದ ಅಧ್ಯಕ್ಷರಾಗಿದ್ದ ಡಾ.ಕೆ.ಎಂ.ಮೋಹನ ಗುರುಸ್ವಾಮಿಯವರು ಈಗ ಅಖಿಲ ಭಾರತ ಸೇವಾ ಸೈನ್ಯದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅಯ್ಯಪ್ಪ ಭಕ್ತರಲ್ಲಿ ಸಂತಸವನ್ನುಂಟುಮಾಡಿದೆ.

ಇನ್ನೂ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಕೇರಳದ ಅಯ್ಯಪ್ಪ ಸ್ವಾಮಿಯು ಜನಿಸಿ 12 ವರ್ಷ ಬೆಳೆದ ಪಂದಳದ ಅರಮನೆಯ ಅಜ್ಜಿಯವರ ಮಗನಾದ ಕೇರಳದ ವರ್ಮ ಕೆ.ಆರ್.ರವರು ಆಯ್ಕೆಯಾಗಿದ್ದಾರೆ.

ಅಯ್ಯಪ್ಪ ಸ್ವಾಮಿ ಕುರಿತು ಸಾಕಷ್ಟು ಸಂಗೀತ ಸಂಯೋಜನೆ, ಸಂಗೀತಕ್ಕೆ ಧ್ವನಿಯಾಗಿರುವುದು ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗದ ಬಹುತೇಕ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಸನ್ಮಾರ್ಗ ಕಲ್ಪಿಸಿದ ಡಾ.ಕೆ.ಎಂ.ಮೋಹನ‌ ಗುರುಸ್ವಾಮಿಯವರು ರಾಷ್ಟ್ರೀಯ ಅಧ್ಯಕ್ಷರಾಗಿ ಅಯ್ಕೆ ಆಗಿ ಮತ್ತಷ್ಟು ಸಾಮಾಜಿಕ ಕಾರ್ಯಕ್ಕೆ ಸನ್ನದ್ಧರಾಗಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

24/09/2021 09:32 pm

Cinque Terre

79.31 K

Cinque Terre

2

ಸಂಬಂಧಿತ ಸುದ್ದಿ