ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಐದು ದಿನಗಳ ಮನೆ ಗಣೇಶನಿಗೆ ವಿದಾಯ ಹೇಳಿದ ವಾಣಿಜ್ಯ ನಗರಿ ಜನತೆ...!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪಿಸಿದ ಐದು ದಿನಗಳ ಸಾರ್ವಜನಿಕ ಹಾಗೂ ಮನೆಮನೆಗಳ ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲಾಯಿತು.

ಗಣೇಶ ಪ್ರತಿಷ್ಠಾಪಿಸಿ 5 ನೇ ದಿನವಾದ ಮಂಗಳವಾರ ಬೆಳಗ್ಗೆಯಿಂದಲೇ ಸಾರ್ವಜನಿಕ ಗಣೇಶ ವಿಗ್ರಹಗಳನ್ನು ನಗರದ ವಿವಿಧ ಬಡಾವಣೆಗಳಲ್ಲಿ ಯಾವುದೇ ಮೆರವಣಿಗೆ ನಡೆಸದೇ ಸರಳವಾಗಿ ವಿಸರ್ಜಿಸಲಾಯಿತು.

ಹುಬ್ಬಳ್ಳಿಯ ಗಣಪತಿಗಳನ್ನು ನಗರದ ಇಂದಿರಾ ಗಾಜಿನ ಮನೆಯ ಆವರಣದಲ್ಲಿರುವ ಬಾವಿ ಹಾಗೂ ಹಳೇಹುಬ್ಬಳ್ಳಿ ಶ್ರೀನಗರದ ಕಪಿಲಾ ಭಾವಿಯಲ್ಲಿ ವಿಸರ್ಜನೆ ಮಾಡಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ಶಾಂತಿಯುತವಾಗಿ ಗಣೇಶನಿಗೆ ವಿದಾಯ ಹೇಳಲಾಯಿತು. ಮತ್ತೊಂದೆಡೆ ದೇಶಪಾಂಡೆ ನಗರದ ಕೃಷ್ಣಾನಗರದಲ್ಲಿ ಗಣೇಶ ಮೂರ್ತಿಯ ದರ್ಶನವನ್ನು ಮುಸ್ಲಿಂ ಸಮುದಾಯದವರು ಸಹ ಪಡೆದುಕೊಂಡಿದ್ದು ವಿಶೇಷವಾಗಿತ್ತು.

Edited By : Shivu K
Kshetra Samachara

Kshetra Samachara

15/09/2021 02:06 pm

Cinque Terre

32.56 K

Cinque Terre

0

ಸಂಬಂಧಿತ ಸುದ್ದಿ