ನವಲಗುಂದ : ಕಳೆದ ವರ್ಷ ಗಣೇಶೋತ್ಸವಕ್ಕೆ ಕೊರೊನಾ ಕರಿ ಛಾಯೆಯಿಂದ ಹಬ್ಬ ಆಚರಣೆಗೆ ಸಾಕಷ್ಟು ನಿರ್ಬಂಧಗಳನ್ನು ಹೇರಿರುವುದರಿಂದ ಸಾರ್ವಜನಿಕರಲ್ಲಿ ಸಂತಸ ಮರೆಯಾಗಿತ್ತು. ಆದರೆ ಈ ಬಾರಿಯ ಗಣೇಶೋತ್ಸವ ಜನರಲ್ಲಿ ಸಂತಸವನ್ನು ಮರಳಿ ತಂದಿದೆ.
ಶುಕ್ರವಾರ ನವಲಗುಂದದ ಜನತೆಯ ಮನೆ ಮನೆಗಳಿಗೆ ಗಣಪ ಸಾಗುವ ದೃಶ್ಯಗಳು ಎಲ್ಲೇಡೆ ಸಾಮಾನ್ಯವಾಗಿತ್ತು.
ಹೌದು ಗಣೇಶ ಚತುರ್ಥಿ ಹಿನ್ನಲೆ ಇಂದು ಪಟ್ಟಣದ ಜನರು ಗಜಮುಖನನ್ನು ತಮ್ಮ ತಮ್ಮ ಮನೆಗಳಿಗೆ ಕೊಂಡೋಯ್ಯುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿದ್ದವು. ಇನ್ನು ಹೂವು, ಹಣ್ಣು, ಕಾಯಿಗಳ ಮಾರಾಟ ಬಲು ಜೋರಾಗಿಯೇ ನಡೆದಿತ್ತು. ಒಟ್ಟಾರೆಯಾಗಿ ಈ ಬಾರಿಯ ಗಣೇಶೋತ್ಸವ ಜನರಲ್ಲಿ ಸಡಗರ ಸಂಭ್ರಮವನ್ನು ಮರಳಿ ತಂದಿದೆ ಎನ್ನಬಹುದು.
Kshetra Samachara
10/09/2021 12:47 pm