ಧಾರವಾಡ : ಮೊಹರಂ ಹಬ್ಬ ಬಂದ್ರೆ ಸಾಕು ಚಿಕ್ಕ ಮಕ್ಕಳಿಂದ ಹಿಡಿದು ಯುವಕರು ಮತ್ತು ಹಿರಿಯರು ತಮ್ಮ ಹರಕೆಯಂತೆ ಹುಲಿಗಳ ವೇಷ ಧರಿಸಿ, ವಿಶಿಷ್ಟ ಭಂಗಿಗಳ ಮೂಲಕ ಹಲಿಗೆ ಬಾರಿಸುತ್ತಾ, ಹೆಜ್ಜೆಗಳನ್ನು ಹಾಕುತ್ತಾ ಮನೆ ಮನೆಗೆ ಹೋಗುತ್ತಾ ಭಕ್ತಿ ಸಮರ್ಪಿಸುವ ಮೂಲಕ ಮೊಹರಂ ಆಚರಿಸಿಸುತ್ತಾರೆ.
ಹೌದು! ಮುಸ್ಲಿಂ ಭಾಂಧವರಿಗೆ ಹೊಸ ವರ್ಷದ ಆರಂಭದ ಸಂಕೇತ. ರಂಜಾನ್ ನಂತೆ ಈ ತಿಂಗಳು ಕೂಡಾ ಮುಸ್ಲಿಂ ಭಾಂದವರಿಗೆ ಪವಿತ್ರ ತಿಂಗಳು,
ಹಿಂದೂ ಮುಸ್ಲಿಂ ಎನ್ನದೆ ತಮ್ಮ ಹರಕೆಯಂತೆ ಪ್ರತಿಯೊಬ್ಬರೂ ಹುಲಿ ವೇಷಧಾರಿ ಧರಿಸಿ ಹರಕೆ ತಿರಿಸುತ್ತಾರೆ.ಯಾವುದೇ ತಾರತಮ್ಯವಿಲ್ಲದೇ, ಸರ್ವಧರ್ಮೀಯರು ಪಾಲ್ಗೊಳ್ಳುವ ಈ ಹಬ್ಬ, ಮುಸ್ಲಿಂ ಭಾಂಧವರಿಗೆ ಹೊಸ ವರ್ಷದ ಆರಂಭದ ಸಂಕೇತವಾಗಿದೆ.
ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಹಬ್ಬಗಳಲ್ಲಿ ಮೊಹರಂ ಪ್ರಮುಖವಾದುದ್ದು,ನಗರದಲ್ಲಿಂದು ಹಲವು ಕಡೆ ಹುಲಿ ಬಣ್ಣ ಹಂಚುತ್ತಿರುವ ದೃಶ್ಯಗಳು ಕಂಡು ಬಂದವು ಚಿಕ್ಕ ಮಕ್ಕಳು,ವಯಸ್ಕರು, ವೃದ್ಧರು ಸೇರಿದಂತೆ ಎಲ್ಲರು ತಮ್ಮ ಬೇಡಿಕೆಯನ್ನ ಈಡೇರಿಸಿದ ದೇವ್ರಿಗೆ ಹುಲಿ ಬಣ್ಣ ಬಳಿದುಕೊಂಡು ಶ್ರದ್ದಾಪೂರ್ವಕ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ,ಯಲ್ಲಪ್ಪ ಹೆಬ್ಬಳ್ಳಿ ಅವರು,ಕಳೆದ 60 ವರ್ಷದಿಂದ ಹುಲಿ ವೇಷ ಧರಿಸುತ್ತ ಬಂದಿರುವೆ, 6 ತಿಂಗಳಿದ್ದಾಗ ನನಗೆ ವಿಪರೀತ ಜ್ವರ ಕಾಣಿಸಿಕೊಂಡು ಬಳಲುತ್ತಿದ್ದ ಸಮಯದಲ್ಲಿ ನಮ್ಮ ಅಜ್ಜಿ ದೇವ್ರಿಗೆ ಹರಕೆ ಹೊತ್ತ ಪರಿಣಾಮ ಗುಣಮುಖನಾಗಿದ್ದೇನೆ. ಹೀಗಾಗಿ ಕಳೆದ 60 ವರ್ಷದಿಂದಲೂ ಮೈಗೆ ಹುಲಿ ಬಣ್ಣ ಹಚ್ಚಿಕೊಂಡು ಬರುತ್ತಿದ್ದೇನೆ. ಇತ್ತೀಚಿಗೆ ಕೈಗೆ ಅಷ್ಟೇ ಬಣ್ಣ ಹಚ್ಚುಕೊಳ್ಳುತ್ತಿದ್ದೆನೇ ಎಂದು ಹೇಳಿದರು.
ಕೊರೊನಾ ಮದ್ಯಯು ಮೊಹರಮ್ ಹಬ್ಬವನ್ನು ಸರಳವಾಗಿ ಆಚರಣೆ ಮಾಡುತ್ತಿದ್ದು, ನಗರದಾದ್ಯಂತ ಗೆಜ್ಜೆ ಸಪ್ಪಳ ಕೇಳುತ್ತಲ್ಲೇ ಹೆಜ್ಜೆ ಮೇಳ ತಂಡವನ್ನು ಹೆಜ್ಜೆಯ ಕುಣಿತಕ್ಕೆ ಮಕ್ಕಳು ಯುವಕರು ಮನಸೂರೆಗೊಳ್ಳುತ್ತಿರುವುದು ವಿಶೇಷವಾಗಿದೆ.
ಪ್ರಶಾಂತ ಲೋಕಾಪುರ ಪಬ್ಲಿಕ್ ನೆಕ್ಸ್ಟ್ ಧಾರವಾಡ
Kshetra Samachara
19/08/2021 10:42 pm