ಕಲಘಟಗಿ : ಪಟ್ಟಣದಲ್ಲಿನ ಶ್ರೀ ಗ್ರಾಮದೇವಿಗೆ ಮಹಿಳೆಯರು ಶುಕ್ರವಾರ ಉಡಿ ತುಂಬಿ ಪುನೀತರಾದರು.ಪಟ್ಟಣದ ಶ್ರೀ ಗ್ರಾಮದೇವಿ ದೇವಸ್ಥಾನಕ್ಕೆ ಡೊಳ್ಳು ಹಾಗೂ ವಿವಿಧ ಮಂಗಲ ವಾದ್ಯಗಳು ಹಾಗೂ ಉಘೇ ಉಘೇ ಎಂಬ ಜಯ ಘೋಷಗಳ ಮೂಲಕ ಪಟ್ಟಣದ ಜನರು ದೇವಸ್ಥಾನಕ್ಕೆ ಆಗಮಿಸಿ ಉಡಿತುಂಬಿ ಭಕ್ತಿ ಸಮರ್ಪಿಸಿದರು.
ಆಷಾಡ ಮಾಸದಲ್ಲಿ ಮಂಗಳವಾರ,ಶುಕ್ರವಾರ ಹೀಗೆ ಐದು ವಾರಗಳನ್ನು ಮಾಡಿ ನಂತರ ಶುಕ್ರವಾರದಂದು ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ದ್ಯಾಮವ್ವ,ದುರ್ಗವ್ವ ಹಾಗೂ ಮೂರುಮುಖದ್ವ ಗೆ ಉಡಿ ತುಂಬಿ ಮಳೆ ಬೆಳೆ ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಲಾಯಿತು.
Kshetra Samachara
06/08/2021 05:18 pm