ಕುಂದಗೋಳ : ಪಟ್ಟಣದ ದೇವನೂರು ರಸ್ತೆ ಪಕ್ಕದ ಮೈಲಾರಲಿಂಗೇಶ್ವರ ಶಿಬಾರ ಗಟ್ಟಿಯಲ್ಲಿಂದು ಪಟ್ಟಣದ ಗ್ರಾಮಸ್ಥರು ಮೈಲಾರ ಜಾತ್ರಾ ಮಹೋತ್ಸವವನ್ನು ಆಚರಿಸಿದರು.
ಶಿಬಾರಗಟ್ಟಿಗೆ ಪೂಜೆ ಪುನಸ್ಕಾರ ನೆರವೇರಿಸಿ ಗೋರವಯ್ಯ ವೇಷಧಾರಿಗಳು ದೇವರ ಚಾಕರಿ ಮಾಡಿ ದೊಡ್ಡ ಮೈಲಾರದ ಜಾತ್ರಾ ಸೊಬಗನ್ನು ಕುಂದಗೋಳದಲ್ಲೇ ಸವಿದರು.
ಮೈಲಾರಲಿಂಗೇಶ್ವರನ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
Kshetra Samachara
01/03/2021 05:29 pm